HomePage_Banner_
HomePage_Banner_

ರಸ್ತೆ ಕೆಸರುಮಯ ಸಂಚಾರ ಅಯೋಮಯ

ಮಡಂತ್ಯಾರು : ಇಲ್ಲಿನ ಮಾಲಾಡಿ ಶಕ್ತಿನಗರ ನಡುಮನೆ ರಸ್ತೆಯಲ್ಲಿ ಕೆಸರು ತುಂಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಕಳೆದ ಮೂರು ವರ್ಷಗಳಿಂದ ಈ ರಸ್ತೆಯ ದುರಸ್ತಿ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗುತ್ತಿದೆಯಾದರೂ ಯಾರೂ ಕೂಡ ಗಮನ ಹರಿಸುತ್ತಿಲ್ಲ. ಅಲ್ಪಸ್ವಲ್ಪ ಚರಂಡಿ ವ್ಯವಸ್ಥೆಯನ್ನು ಹೊಂದಿದ್ದ ಈ ರಷ್ತೆಯಲ್ಲಿ ನೀರಿನ ಪೈಪ್ ಲೈನ್ ಚರಂಡಿ ಬದಿಯಲ್ಲೇ ಹಾಕಿರುವುದರಿಂದ ಮಣ್ಣು ಹಾಕಿ ಚರಂಡಿಯನ್ನೂ ಮುಚ್ಚಲಾಗಿತ್ತು. ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿಗೆ ಸುಧೀಂದ್ರ ಎಂಬವರು ಪತ್ರದಲ್ಲಿ ದೂರನ್ನೂ ನೀಡಿ ಸಮರ್ಪಕ ರಸ್ತೆಯ ಅನಿವಾರ್ಯತೆ ಇದ್ದು ಸಂಪೂರ್ಣ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಅಲ್ಲಿನ ನಿವಾಸಿಗಳ ಪರವಾಗಿ ಕೇಳಿಕೊಂಡಿದ್ದರು. ಆದರೂ ಇನ್ನೂ ಸಂಪೂರ್ಣ ದುರಸ್ತಿ ಭಾಗ್ಯ ಈ ರಸ್ತೆಗೆ ದೊರೆತಿಲ್ಲ.

ಜೆಲ್ಲಿ ಹಾಕಿ ಸಂಚಾರಕ್ಕೆ ಅನುಕೂಲ ಕನಿಷ್ಠ ಪಕ್ಷ ಜೆಲ್ಲಿ ಹುಡಿ ಹಾಕಿ ಜೆಲ್ಲಿ ಹಾಕಿ ಈ ಮಳೆಗಾಲದಲ್ಲಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡಿ ಎಂದು ಪಂಚಾಯಿತಿಯಲ್ಲಿ ಹೇಳಿದಾಗ ಜೆಲ್ಲಿ ತಂದು ಕೊಡುವ ವ್ಯವಸ್ಥೆ ಮಾಲಾಡಿ ಗ್ರಾಪಂನವರು ಮಾಡಿದರು. ಸ್ಥಳೀಯರೇ ಸೇರಿ ಜೆಲ್ಲಿ ಸುರಿದು ತಕ್ಕಮಟ್ಟಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ನಡೆಸಿದ್ದಾರೆ. ಈಗಾಗಲೇ ಅನೇಕ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಜಾರಿ ಬಿದ್ದಿವೆ. ಅನೇಕರು ಈ ಸ್ತೆಯ ಸಹವಾಸವೇ ಬೇಡ ಎಂದು ತಮ್ಮ ವಆಹನಗಳನ್ನು ದೂರದಲ್ಲೇ ಇರಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಜೆಲ್ಲಿ ಹಾಕಿ ಸಂಚಾರಕ್ಕೆ ಅನುವ ಮಾಡುವ ವ್ಯವಸ್ಥೆ ಮಾಡಲಾಗಿದೆಯಾದರೂ ಮಳೆಗೆ ಜೆಲ್ಲಿ ಕೊಚ್ಚಿ ಹೋಗುವ ಸಂಭವವೂ ಇದೆ. ಶೀಘ್ರದಲ್ಲಿ ಈ ರಸ್ತೆಯ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಾರಿ ಹೇಗೂ ಸ್ಥಳೀಯರೇ ಸೇರಿ ದುರಸ್ತಿ ಕಾರ್ಯವನ್ನು ಮಾಡಿದ್ದೇವೆ. ಈ ಮಳೆಗಾಲವನ್ನು ಹೇಗೂ ದೂಡುತ್ತಿದ್ದೇವೆ. ಮಳೆಗಾಲ ಮುಗಿದ ಕೂಡಲೇ ರಸ್ತೆಯ ದುರಸ್ತಿಯ ಅನಿವಾರ್ಯತೆ ಇದೆ. ಸಂಬಂಧಪಟ್ಟ ಗ್ರಾಪಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ಸ್ಥಳೀಯರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಮಾಡಬೇಕಿದೆ.-ಸುಧೀಂದ್ರ ನಡುಮನೆ

                                                                                                                                                                                                 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.