HomePage_Banner_
HomePage_Banner_

ಪದ್ಮುಂಜ ಪ್ರಗತಿ ಪರಿಶೀಲನೆ ಹಾಗೂ ಸಾಲ ವಿತರಣೆ

ಪದ್ಮುಂಜ ಇಲ್ಲಿಯ ವೀರಮಾಚಿದೇವ ವಿವಿದುದ್ದೇಶ ಸಹಕಾರಿ ಸಂಘ (ನಿ)ಪುತ್ತೂರು ಉಜಿರೆ ಶಾಖೆ. ಇದರ ಮೂಲಕ ನಡೆಯುತ್ತಿರುವ ವೀರಮಾಚಿದೇವ ಸ್ವ ಸಹಾಯ ಸಂಘ, ನಂದಾದೀಪ ಸ್ವ ಸಹಾಯ ಸಂಘ, ಸ್ನೇಹ ಸಂಗಮ ಸ್ವ ಸಹಾಯ ಸಂಘ, ಉಮಾಮಹೇಶ್ವರಿ ಸ್ವ ಸಹಾಯ ಸಂಘ ಪದ್ಮುಂಜ ಇದರ ಪ್ರಗತಿ ಪರಿಶೀಲನಾ ಸಭೆಯು ಕಲ್ಕುಡ ಮಾಡ ಪದ್ಮುಂಜ ದಲ್ಲಿ ಜರಗಿತು.

ಸಭೆಯಲ್ಲಿ ಸಂಘದ ದಾಖಲಾತಿಗಳನ್ನು ಪರಿಶೀಲಿಸಿ ಸಂಘದ ಸದಸ್ಯರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ವೀರಮಾಚಿದೇವ ವಿವಿದೋದ್ದೇಶ ಸಹಕಾರಿ ಸಂಘ ಉಜಿರೆ ಶಾಖಾ ಮ್ಯಾನೇಜರ್ ಯೋಗೇಶ್, ವೀರಮಾಚಿದೇವ ವಿವಿದುದ್ದೇಶ ಸಹಕಾರಿ ಸಂಘ( ನಿ )ಪುತ್ತೂರು ಇದರ ನಿರ್ದೇಶಕರಾದ  ಶೋಭಾ ಸೀತಾರಾಮ ಮಡಿವಾಳ ಪದ್ಮುಂಜ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಈ ಸಂದರ್ಭ ತಂಡದ ಸದಸ್ಯರಿಗೆ ಜಯಂತ್ ಮುಂಡಾಜೆಯವರು ಸಾಲದ ಚಕ್ ವಿತರಣೆ ಮಾಡಿದರು. ಬೇಬಿ ಸ್ವಾಗತಿಸಿದರು. ಅಂಬಿಕಾರವರು ಧನ್ಯವಾದ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.