ಸಾಮಾಜಿಕ ಜಾಲತಾಣದಲ್ಲಿ ಅನ್ಯಧರ್ಮದ ಬಗ್ಗೆ ಅನಪೇಕ್ಷಿತ ಪೋಸ್ಟ್: ಆರೋಪಿಗೆ ಜಾಮೀನು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಅನ್ಯಧರ್ಮದ ಬಗ್ಗೆ ಅನಪೇಕ್ಷಿತ ಪೋಸ್ಟ್ ಹಾಕಿ ತಲೆಮರೆಸಿಕೊಂಡಿದ್ದ, ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಳ್ಳಮಂಜದ ತನ್ನ ಸಂಬಂಧಿಕರ ಮನೆಯಿಂದ ಬಂಧಿಸಿದ ಘಟನೆ ಆ.25ರಂದು ವರದಿಯಾಗಿದೆ.

ಆ. 5ರ ರಾಮಮಂದಿರ ಭೂಮಿ ಪೂಜೆಯಂದು ಸೆಕ್ಷನ್ ಉಲ್ಲಂಘಿಸಿ ಪಟಾಕಿ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯರು ನೀಡಿದ ದೂರಿನಂತೆ ಪಂಜಾಲಕಟ್ಟೆ ಠಾಣೆಯಲ್ಲಿ ಅವರ ಮೇಲೆ ಕೇಸ್ ದಾಖಲಾಗಿತ್ತು. ಆ ಬಳಿಕ ಸಾಮಾಜಿಕ ಜಾಲದಲ್ಲಿ ತನ್ನನ್ನು ಯಾರಿಗೂ ಏನು ಮಾಡಲು ಸಾದ್ಯವಿಲ್ಲ ಎಂದು ಅನ್ಯ ಧರ್ಮದ ಬಗ್ಗೆ ಅನಪೇಕ್ಷಿತ ಪೋಸ್ಟ್‍ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪದಲ್ಲಿ ಕರ್ಪಾಡಿ ನಾಗರಿಕರ ದೂರಿನನ್ವಯ ಪುಂಜಾಲಕಟ್ಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ನಂತರ ತಲೆಮರೆಸಿಕೊಂಡಿದ್ದ ಆರೋಪಿ ಬಲ್ಲಮಂಜ ಸಂಬಂಧಿಕರ ಮನೆಯಲ್ಲಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದಾಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.