ನಿವೃತ ಪಿಎಸ್ಐ ಹಾಜಿ.ಕೆ.ಎಂ.ಯೂಸುಫ್ ನಿಧನ

ವೇಣೂರು: ಇಲ್ಲಿನ ಕುಂಡದಬೆಟ್ಟಿನ ನಿವಾಸಿ ನಿವೃತ ಪಿಎಸ್ಐ, ಹಾಜಿ ಕೆ.ಎಂ. ಯೂಸುಫ್ (80) ರವರು ಅಲ್ಪ ಕಾಲದ ಅಸೌಖ್ಯದಿಂದ ಅಗೋಸ್ತ್ 23 ರಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.‌.ಇವರು ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪಿಎಸ್ಐ ಆಗಿ ಉತ್ತಮ ಸೇವೆ ಸಲ್ಲಿಸಿರುತ್ತಾರೆ.ಅಲ್ಲದೆ ಕುಂಡದಬೆಟ್ಟು ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದು ಇದೀಗ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು..ದ.ಕ‌. ಜಿಲ್ಲಾ ವಕ್ಫ್ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು..ಸರಳ ಸಜ್ಜನಿಕೆಯವರಾದ ಇವರು ಪತ್ನಿ, ಇಬ್ಬರು ಪುತ್ರರು, ಮೂರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.