ತಲ್ವಾರಿಂದ ಕಡಿದು ಮಗನಿಂದಲೇ ತಂದೆಯ ಹತ್ಯೆ

ಬೆಳ್ತಂಗಡಿ:ಇಲ್ಲಿಯ ಬೆಳ್ತಂಗಡಿ ಜೂನಿಯರ್ ಕಾಲೇಜು ಬಳಿ ಬೆಳ್ಳಗೆ ಸುಮಾರು 6.40 ಸಮಯಕ್ಕೆ ವಾಕಿಂಗ್ ಹೋಗುವ ಸಮಯದಲ್ಲಿ ವಾಸು ಸಪಲ್ಯ ಎಂಬಾತರನ್ನು ಯಾರೋ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಗೈರು ಪರಾರಿಯಾದ ಘಟನೆ ಆ.24 ರಂದು ವರದಿಯಾಗಿದೆ.  ಹಿರಿಯ ಕಾರು ಚಾಲಕ ವಾಸು ಸಪಲ್ಯ (73) ಎಂಬವರ ಮೇಲೆ ಇಂದು ಮುಂಜಾನೆ ವಾಕಿಂಗ್ ಹೀಗುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ರಗಳಿಂದ ಹಲ್ಲೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಾಳಿ ಮಾಡಿದ ವ್ಯಕ್ತಿಗಳು  ತಲಾವಾರನ್ನು  ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದು, ಮಗನೇ ಹಲ್ಲೆ ನಡೆಸಿದ ಬಗ್ಗೆ ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಒಬ್ಬ ಉದ್ದೋಗ ಇಲ್ಲದೆ ಮನೆಯಲ್ಲಿದ್ದು ಹಣಕ್ಕಾಗಿ ಜಗಳವಾಡುತ್ತಿದ್ದ.ಈತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪರಾರಿಯಾಗಿದ್ದಾನೆ.ಪೋಲೀಸರು ಈತನಿಗಾಗಿ ಹುಡುಕಾಟ ಪ್ರಾರಂಬಿಸಿದ್ದಾರೆ.  ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ವಾಸು ಹಾಗೂ ಅವರ ಮಗನ ನಡುವೆ ಕ್ಷುಲ್ಲಕ  ವಿಷಯದಲ್ಲಿ ಗಲಾಟೆ ಯಾಗಿದ್ಧು  ಮಗನ ಮೇಲೆಯೇ ಸಂಶಯ ವ್ಯಕ್ತವಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.