ತೋಟತ್ತಾಡಿ: ಚಿರತೆ ದಾಳಿ; ದನದ ಕರು ಸಾವು

ಮುಂಡಾಜೆ: ಬೆಳ್ತಂಗಡಿ ತಾ.ನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕಲ್ಲರಿಗೆ ಧರ್ಣಪ್ಪ ಗೌಡ ಎಂಬವರ ಒಂದು ವರ್ಷ ಪ್ರಾಯದ ಕರುವೊಂದು ಆ.21 ರಂದು ರಾತ್ರಿ ಚಿರತೆ ದಾಳಿಗೆ ತುತ್ತಾಗಿದೆ.

ದನದ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಜಾನುವಾರುಗಳು ಕೂಗಿಕೊಂಡಾಗ ಮನೆಮಂದಿ ಎಚ್ಚರಗೊಂಡು ಧಾವಿಸುವಷ್ಟರಲ್ಲಿ ಕರುವನ್ನು ಕೊಂದು ಹಾಕಿದ್ದ ಚಿರತೆ ಕಾಡಿನ ಕಡೆ ಓಡಿದೆ. ಈ ಪ್ರದೇಶದಲ್ಲಿ ದಾಸನ್, ಚೇತನ್, ಬಾಬು ಇವರ ಮನೆಗಳ ಸುತ್ತ-ಮುತ್ತ ಕಳೆದ ಕೆಲವು ದಿನಗಳಿಂದ ಹಲವಾರು ನಾಯಿಗಳು ಕೂಡ ಚಿರತೆ ದಾಳಿಗೆ ಬಲಿಯಾಗಿರುವ ಅವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.