ನಾಳ ಶ್ರೀ ಕ್ಷೇತ್ರದಲ್ಲಿ ಕದಿರು(ತೆನೆ)ತುಂಬಿಸುವ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ನಾಳ : ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.22 ರಂದು ಪೂರ್ವಾಹ್ನ 8:30 ಕ್ಕೆ ಕದಿರು (ತೆನೆ) ತುಂಬಿಸುವ ಕಾರ್ಯಕ್ರಮ ಜರಗಿತು.ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ನಡೆಯುತ್ತದೆ. ಆದರೆ ಈ ವರ್ಷ ಸರಳವಾಗಿ ನೆರವೇರಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ವಸಂತ ಮಜಲು , ಹಿರಿಯರಾದ ಜನಾರ್ದನ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಹಲವು ವರ್ಷಗಳಿಂದ ನಾಳ ದೇವಸ್ಥಾನದಕ್ಕೆ ಉಚಿತವಾಗಿ ತೆನೆ ನೀಡುವ ಭತ್ತದ ಗದ್ದೆಯ ಯಜಮಾನ ಉರ್ಬನ್ ಮೋರಸ್ ಪರಪ್ಪು ಇವರನ್ನು ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ವಸಂತ ಮಜಲು ಶಾಲು ಹೊದಿಸಿದರು, ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು ಫಲ- ಪುಷ್ಪ,ಪ್ರಸಾದ ನೀಡಿ ಗೌರವಿಸಿದರು.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.