ಶ್ರೀರಾಮ ಕ್ಷೇತ್ರದ ಗುರುದೇವ ಮಠಕ್ಕೆ ಭಟ್ಕಳ ಮಾಜಿ ಶಾಸಕ ಮಂಕಾಳ್ ಎಸ್ ವೈದ್ಯ ಮತ್ತು ಭಕ್ತಾಧಿಗಳು ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಹಾಗೂ ಶ್ರೀರಾಮ ಕ್ಷೇತ್ರದ ಶಾಖಾ ಮಠ ಕರಿಕ್ಕಲ್ ಧ್ಯಾನ ಮಂದಿರ ನಿರ್ಮಿಸಿಕೊಟ್ಟ ಮಂಕಾಳ್ ಎಸ್ ವೈದ್ಯ ಇವರು ತಮ್ಮ 150 ಜನ ಬೆಂಬಲಿಗರ ಜೊತೆ ಸೇರಿ ಚಾತುರ್ಮಾಸ್ಯ ವ್ರತದಲ್ಲಿ ಇರುವ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಆ.21 ರಂದು ಭೇಟಿಯಾಗಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿ.ಪಂ ಅಧ್ಯಕ್ಷ ಜಯಶ್ರೀ ಮೊಗೇರ, ಭಟ್ಕಳ ತಾ.ಪಂ ಅಧ್ಯಕ್ಷ ಈಶ್ವರ ನಾಯ್ಕ, ತಾ.ಪಂ ಉಪಾಧ್ಯಕ್ಷೆ ರಾಧಾ, ಭಟ್ಕಳ ಎ.ಪಿ.ಎಂಸಿ ಅಧ್ಯಕ್ಷ ಗೋಪಾಲಕೃಷ್ಣ, ಜಿ.ಪಂ ಸದಸ್ಯರುಗಳಾದ ಸಿಂಧೂ ಬಾಸ್ಕರ ನಾಯ್ಕ್, ಕು.ಪುಷ್ಪನಾಯ್ಕ, ಆಲರ್ಬ್ ಡಿ’ಕೋಸ್ತ,  ಪುತ್ತೂರು ಬಿಲ್ಲವ ಸಂಘದ ಕರುಣಾಕರ ಪೂಜಾರಿ ಹಾಗೂ ಉಪ್ಪಿನಂಗಡಿಯ ವರದರಾಜು ಇವರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ ಭಜನೆ, ಸ್ವಾಮೀಜಿ ಗುರುಪಾಧುಕ ಪೂಜೆ, ಶ್ರೀರಾಮ ಪರಿವಾರ ದೇವರ ಮತ್ತು ನಾರಾಯಣ ಗುರುಗಳ ವಿಶೇಷ ಪೂಜೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.