HomePage_Banner_
HomePage_Banner_

ಶಿಕ್ಷಣ ವಿಧಿ ವಿತರಣೆ; ನೊಂದ ಕುಟುಂಬದ ಸದಸ್ಯರಿಗೆ ಶಿಕ್ಷಣ ವೆಚ್ಚ ಭರಿಸಿದ ವೈದ್ಯ ದಂಪತಿ

ಬೆಳ್ತಂಗಡಿ : ರೋಟರಿ ಸಂಸ್ಥೆ ಹಲವಾರು ರೀತಿಯಲ್ಲಿ ಸಮಾಜಕ್ಕೆ ಸೇವೆಯನ್ನು ನೀಡುತ್ತಿದ್ದು ವಿಶೇಷವಾಗಿ ಶಿಕ್ಷಣಕ್ಕೆ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ನೆರವು ನೀಡಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಧನಂಜಯ ರಾವ್ ಹೇಳಿದರು.  ಬೆಳ್ತಂಗಡಿ ರೋಟರಿ ಭವನದಲ್ಲಿ, ನಿಡ್ಲೆ ಶಂಕರಡ್ಕ ಚೆನ್ನಪ್ಪ ಗೌಡ ಕುಟುಂಬದ ವಿದ್ಯಾರ್ಥಿಯನ್ನು ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ‌ ಮಾತನಾಡಿದರು.

ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೆ ಹಾಗೂ ಸುಷ್ಮಾ ಡೋಂಗ್ರೆ ಅವರ ವೈವಾಹಿಕ ಬೆಳ್ಳಿಹಬ್ಬ ದ ಪ್ರಯುಕ್ತ ದಂಪತಿ ಈ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಿತು.ಡಾ| ಶಶಿಧರ್ ಡೋಂಗ್ರೆ ಮಾತನಾಡಿ, ಸಮಾಜದಲ್ಲಿ ಇಂತಹ ಕಷ್ಟದ ಕುಟುಂಬಗಳು ಇದ್ದು ಜೀವನ ನರಕಯಾತನೆ ಅನುಭವಿಸುತ್ತಿರುವ ಸಂದರ್ಭದಲ್ಲಿ ನಮಗೂ ಸೇವೆ ಮಾಡುವ ಅವಕಾಶ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶ್ರೀಧರ್ ಕೆ.ವಿ, ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಚೆನ್ನಪ್ಪ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಯಶವಂತ ಪಟವರ್ಧನ್, ಡಿ.ಎಂ ಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ್ ಬಳಂಜ ಕಾರ್ಯಕ್ರಮ ನಿರೂಪಿಸಿ, ಶ್ರವಣ್ ಕುಮಾರ್ ನಾಳ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.