ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ವತಿಯಿಂದ ಬಡ ವಿದ್ಯಾರ್ಥಿಗೆ ಸ್ಮಾರ್ಟ್ ಫೋನ್ ವಿತರಣೆ

ಬೆಳ್ತಂಗಡಿ: ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸುಶ್ಮಿತಾ ದೇವ್, ಕರ್ನಾಟಕ ರಾಜ್ಯಾಕ್ಷರಾದ ಪುಷ್ಪಾ ಅಮರನಾಥ್ ಹಾಗೂ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ ರವರ ಆದೇಶದ ಮೇರೆಗೆ ಭಾರತದ ಆಧುನಿಕ ತಂತ್ರಜ್ಞಾನದ ಜನಕರಾದ ಮಾಜಿ ಪ್ರಧಾನಿ ದಿ|ರಾಜೀವ್ ಗಾಂಧಿಯವರ ಹುಟ್ಟುಹಬ್ಬದ ಸ್ಮರಣಾರ್ಥ ಬೆಳ್ತಂಗಡಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ SSLC ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾಗಿ ಉನ್ನತ ಶಿಕ್ಷಣಕ್ಕೆ ಪೂರಕವಾಗಲು ಆನ್ಲೈನ್ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬೆಳ್ತಂಗಡಿ ತಾಲೂಕಿನ ಬಡ ವಿದ್ಯಾರ್ಥಿ ಪ್ರತೀಕ್ ಲಾಯಿಲ ರಿಗೆ ಸ್ಮಾರ್ಟ್ ಫೋನ್ ನೀಡಲಾಯಿತು.

 

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ  ವಸಂತ ಬಂಗೇರ, ಉಭಯ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರುಗಳಾದ  ಕೆ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಉಷಾ ಶರತ್, ಹಾಜಿರಾ,ಎಪಿಎಂಸಿ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ದಕ್ಕ, ಯುವ ಕಾಂಗ್ರೆಸ್ ಅಧ್ಯಕ್ಷ  ಅಭಿನಂದನ ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಹುಲ್ ಹಮೀದ್, ನಮಿತಾ,ತಾಲೂಕು ಪಂಚಾಯತ್ ಸದಸ್ಯೆ ವಿನುಷಾ,ಶೋಭಾ,ಜೆಸಿಂತಾ, ಆಯೂಬ್ ತಣ್ಣೀರುಪಂಥ, ಅಶ್ರಫ್ ನೆರಿಯ, ಶೇಖರ್ ಕುಕ್ಕೇಡಿ ಮತ್ತು ಪಕ್ಷದ ವಿವಿಧ ಮುಂಚೂಣಿ ಘಟಕಗಳ ಸಂಚಾಲಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.