HomePage_Banner_
HomePage_Banner_

ಬ್ಲಾಕ್ ಕಾಂಗ್ರೇಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸ್ ಜನ್ಮ ದಿನಾಚರಣೆ

ಬೆಳ್ತಂಗಡಿ; ದೇಶದ ಅಭಿವೃದ್ಧಿ ಯಲ್ಲಿ ವೈಜ್ಞಾನಿಕ ಹಾಗೂ ಆಧುನಿಕತೆಯನ್ನು ತುಂಬಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ದಮನಿತ ಸಮುದಾಯಗಳಿಗೆ ಶಕ್ತಿ ತುಂಬಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಬ್ಲಾಕ್ ಕಾಂಗ್ರೇಸ್ ಬೆಳ್ತಂಗಡಿ ಘಟಕದ ವತಿಯಿಂದ ಆ.20 ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯುವ ಜನತೆಗೆ ಮತದಾನದ ಹಕ್ಕು ನೀಡಿ ದೇಶದ ಸಮಗ್ರ ಅಭಿವೃದ್ಧಿಗೆ ದುಡಿದ ರಾಜೀವ್ ಗಾಂಧಿ ಹಾಗೂ ಭೂ ಮಸೂಧೆ ಜಾರಿ ಮೂಲಕ ಕ್ರಾಂತಿಕಾರಿ ಪರಿವರ್ತನೆಗೆ ಕಾರಣರಾದ ದೇವರಾಜ‌ ಅರಸುರವರ ಸ್ಮರಣೆ ಪ್ರತಿಯೊಬ್ಬರಲ್ಲಿ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಜಿ.ಪಂ ಸದಸ್ಯರಾದ‌ ಶಾಹುಲ್ ಹಮೀದ್, ನಮಿತಾ ಪೂಜಾರಿ, ಶೇಖರ ಕುಕ್ಕೇಡಿ, ಯುವ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್, ವಿವಿಧ ಘಟಕಗಳ ಮುಖ್ಯಸ್ಥರಾದ ಉಷಾ ಶರತ್, ಅಶ್ರಫ್ ನೆರಿಯ, ಹಾಜಿರ, ಅಯೂಬ್, ಎ.ಪಿ.ಎಂ.ಸಿ ಅಧ್ಯಕ್ಷ ಚಿದಾನಂದ ಎಲ್ದಡ್ಕ ಉಪಸ್ಥಿತರಿದ್ದರು. ನಾಮದೇವ್ ಮುಂಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.