ಖ್ಯಾತ ತುಳು ನಟ ಅರವಿಂದ ಬೋಳಾರ್ ಇವರ ತೇಜೋವಧೆ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದಿಂದ ಖಂಡನೆ

ತುಳುನಾಡಿನ ಹಾಸ್ಯ ಕಲಾವಿಧ ತುಳುವ ಮಾಣಿಕ್ಯ ಅರವಿಂದ ಬೋಳಾರ್ ಇವರು ಕೆಲವು ದಿನಗಳ ಹಿಂದೆ ಡೈಜಿವರ್ಲ್ಡ್ ನ್ಯೂಸ್ ಚಾನೆಲ್ ಒಂದರಲ್ಲಿ ಕಾರ್ಯಕ್ರಮವನ್ನು ನೀಡುವ ಸಂಧರ್ಭದಲ್ಲಿ ಜ್ಯೋತಿಷಿಯ ಪಾತ್ರವನ್ನು ನಿರ್ವಹಿಸಿದ್ದರು, ಈ ಪಾತ್ರದಲ್ಲಿ ಯಾರಿಗೂ ಅಪಮಾನ ಮಾಡದೆ ಅತ್ಯಂತ ಒಳ್ಳೆಯ ರೀತಿಯಿಂದ ಮಾಡಿದ್ದರೂ ಕೂಡ ಯಾರೋ ಕೆಲವರು ಇವರ ಜನಪ್ರೀಯತೆಯನ್ನು ಸಹಿಸದೆ ಇವರ ವಿರುದ್ದವಾಗಿ ಪೋಲಿಸ್ ಠಾಣೆಯಲ್ಲಿ ಇಲ್ಲಸಲ್ಲದ ದೂರನ್ನು ದಾಖಲಿಸಿದ್ದಾರೆ ಆದರೆ ಅರವಿಂದ್ ಬೋಳಾರ್ ಒಬ್ಬ ತುಳುನಾಡಿನ ಅತ್ಯಂತ ಜನಪ್ರಿಯ ನಟನಾಗಿದ್ದು, ಯಕ್ಷಗಾನ, ನಾಟಕ, ಚಲನಚಿತ್ರಗಳಲ್ಲಿ ನಟಿಸಿ ತುಳುನಾಡಿಗೆ ಕೀರ್ತಿ ತಂದಿರುವ ಮಹಾನ್ ಕಲಾವಿದ. ಇಂತಹ ಕಲಾವಿಧನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವನ್ನು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಅತ್ಯಂತ ಸರಳ ಹಾಗೂ ಎಲ್ಲಾ ಜಾತಿ ಜನಾಂಗದವರೊಟ್ಟಿಗೆ ಬಹಳ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಂತಹ ಮೇರು ವ್ಯಕ್ತಿತ್ವದ ನಟ ಯಾವುದೇ ಜಾತಿ ಜನಾಂಗಕ್ಕೆ ಇವರ ಪಾತ್ರದಲ್ಲಿ ನೋವು ಉಂಟಾಗಲು ಸಾಧ್ಯವಿಲ್ಲ…. ಆದುದರಿಂದ ನಮ್ಮ ಯುವವಾಹಿನಿ (ರಿ) ಬೆಳ್ತಂಗಡಿ ಘಟಕವು ಇವರಿಗೆ ಆದ ಅನ್ಯಾಯವನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳು ಮರುಕಳಿಸಿದರೆ ಪ್ರತಿಭಟನೆ ಅಥವಾ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಲಿದೆ ಇನ್ನು ಮುಂದೆ ಇಂತಹ ಸುಳ್ಳು ಆಪಾದನೆಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನಮ್ಮ ಸಂಘಟನೆ ಆಗ್ರಹಿಸುತ್ತದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.