ರೈತರ ಕ್ಷೇತ್ರ ಪಾಠ ಶಾಲೆ ಪ್ರಾತಕ್ಷಿಕೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಕಳೆಂಜ : ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ 2020:21ನೇ ಸಾಲಿನ ಆತ್ಮ ಯೋಜನೆಯಡಿ ರೈತರ ಕ್ಷೇತ್ರ ಪಾಠ ಶಾಲೆಯ ಎರಡನೆಯ ತರಬೇತಿ ಕಾರ್ಯಕ್ರಮ ವು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಬದಿಮಾರು ಮನೆಯ ಪ್ರಗತಿಪರ ಕೃಷಿಕರಾದ ಶ್ರೀ ವಸಂತ ಗೌಡರ ಮನೆಯಲ್ಲಿ ಆಗಷ್ಟ 18 ರಂದು ನಡೆಯಿತು .ಕಾರ್ಯ ಕ್ರಮವನ್ನು ಶ್ರೀ ವಸಂತ ಗೌಡರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇದಿನಿ ಫಾರ್ಮ್ನ ಮಾಲಕರಾದ ಶ್ರೀಧರ ರಾವ್ ವಹಿಸಿದ್ದರು .ಕೃಷಿ ಅಧಿಕಾರಿ ಶ್ರೀ ಚಿದಾನಂದ ಹೂಗಾರ್ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಕೃಷಿ ಅಧಿಕಾರಿ ಶ್ರೀ ನಾರಾಯಣ ಪೂಜಾರಿಯವರು ಯಾಂತ್ರೀಕೃತ ಪಧ್ಧತಿಯಲ್ಲಿ ಟ್ರೇಯಲ್ಲಿ ನೇಜಿ ಹಾಕುವಲ್ಲಿಂದ ಹಿಡಿದು ವಿವಿಧ ರೀತಿಯ ನಾಟಿಯ ಬಗ್ಗೆ ರೈತರಿಗೆ ಅರ್ಥ ಆಗುವ ರೀತಿಯಲ್ಲಿ ಮಾಹಿತಿ ನೀಡಿದರು .ಕ್ಷೇತ್ರ ಪಾಠಶಾಲೆಯಲ್ಲಿ ರಘು ಚಂದ್ರ ಪೂಜಾರಿ, ರುಕ್ಮಯ ಗೌಡ ಬರೆಮೇಲು,ನಾರಾಯಣ ಗೌಡ ಬೀಜದಡಿ ,ಶೀನಪ್ಪ ಗೌಡ ಸೀಂಬೂಳು, ವಿಠಲ ಗೌಡ ಬದಿಮಾರು,ಗಣೇಶ್ ಗೌಡ ನೇರೋಳ್ತಡಿ, ನೀಲಯ್ಯ ಗೌಡ,ಈರಪ್ಪ ಗೌಡ ಪಿಲ್ಯಡ್ಕ ಎನ್ ಕೆ ಚಾಕೋ ,ನಿಡ್ಲೆ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ರಾದ ರಮೇಶ್ ರಾವ್ ಇತರ ಅನೇಕ ರೈತರು ಉಪಸ್ಥಿತರಿದ್ದರು. ಕು:ತೃಪ್ತಿ ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡಿ ಚಿದಾನಂದ ಹೂಗಾರ್ ಧನ್ಯವಾದ ಸಲ್ಲಿಸಿದರು .ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕು/ಚಂದ್ರ ಕಲಾ ಡಿ ಸಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.