ವೇಣೂರು ಬಜಿರೆ ಪರಿಸರದಲ್ಲಿ ಬಸವನ ಹುಳು ಕಾಟ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಬಜಿರೆ ಗ್ರಾಮದ ಪೆರ್ಮಾಣುಬೈಲು ಮತ್ತು ಅಟ್ಟಾಜೆಬೈಲು ಪರಿಸರದಲ್ಲಿ ಕಳೆದ ೨ವರ್ಷದಿಂದ ಬಸವನ ಹುಳುಗಳ ಕಾಟ ವ್ಯಾಪಕವಾಗಿ ಹರಡುತ್ತಿದ್ದು ಈ ಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಎಲ್ಲಿ ನೋಡಿದರು ಬಸವನ ಹುಳು ಕಂಡು ಬರುತ್ತದೆ. ಸುಮಾರು 100 ಎಕ್ರೆಗೆ ವ್ಯಾಪಿಸಿದ್ದು ತರಕಾರಿ, ಸೊಪ್ಪು, ಅಡಿಕೆ ಮರದ ಹಿಂಗಾರ, ಸಣ್ಣ ಅಡಿಕೆ ಗಿಡದ ಸಿರಿ ತಿಂದು ಕೃಷಿಗೆ ಹಾನಿಯಾಗಿದೆ. ಜೊತೆಗೆ ಮನೆಯ ಬಾವಿ, ಗೋಡೆ, ಶೆಡ್‌ಗಳಲ್ಲಿ ಕೂಡ ಕಾಣಸಿಗುತ್ತಿದೆ.
ಮುದ್ದಾಡಿಯಲ್ಲಿ ಕಾಂಕ್ರೀಟ್ ರಸ್ತೆ ಮಾಡುವಾಗ ಹ್ಯೊಗೆ ಮುಖಾಂತರ ಬಂದಿರಬಹುದು ಅಥವಾ ತೋಟಕ್ಕೆ ಬಳಸುವ ಕುರಿ ಗೊಬ್ಬರದಿಂದ ಈ ಬಸವನ ಹುಳುಗಳು ಬಂದಿರಬಹುದು ಎಂದು ಈ ಭಾಗದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.