ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಗರ್ಭಗುಡಿಯ ದಾರಂದ ಮೂಹೂರ್ತ

ತೋಟತ್ತಾಡಿ: ಇತಿಹಾಸ ಪ್ರಸಿದ್ದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿ, ನಂದಿ ಮಂಟಪದ ಜೀರ್ಣೋದ್ದಾರ ಕೆಲಸಗಳು ಭರದಿಂದ ಸಾಗುತ್ತಿದ್ದು, 2021ರ ವರ್ಷಕ್ಕೆ ಬ್ರಹ್ಮಕಲಶೋತ್ಸವ ಸಿದ್ದತೆಯಲ್ಲಿದೆ. ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿ ಕಾರ್ಯಗಳು ಆಗಿದೆ. ಆ.17 ರಂದು ಶ್ರೀ ಕ್ಷೇತ್ರದ ತಂತ್ರಿಯವರಾದ ಆಲಂಬಾಡಿ ಪದ್ಮನಾಭ ತಂತ್ರಿ ಯವರ ಮಾರ್ಗದರ್ಶನದಲ್ಲಿ ಶಿಲಾಮಯ ದಾರಂದ ಇಡುವ ಕಾರ್ಯಕ್ರಮ ಊರಿನ ಭಕ್ತಾಧಿಗಳ ಹಾಗೂ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ನೆರವೇರಿತು.

ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಮಾಜಿ ಶಾಸಕ ವಸಂತ ಬಂಗೇರ ಕ್ಷೇತ್ರಕ್ಕೆ ಬಂದು ಸಮಿತಿಯವರೊಂದಿಗೆ ಮಾರ್ಗದರ್ಶನದೊಂದಿಗೆ ಪೂರ್ಣ ಸಹಕರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.