ಬೆಳ್ತಂಗಡಿ ಶಾಸಕರ ಶೀಘ್ರ ಗುಣಮುಖವಾಗಲೆಂದು ನಾಳ ದೇವಸ್ಥಾನದಲ್ಲಿ ಪ್ರಾರ್ಥನೆ

ನಾಳ : ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಶೀಘ್ರ ಗುಣಮುಖರಾಗಲಿ ಹಾಗೂ ಮಹಾ ಮಾರಿ ಕೊರೊನಾ ವಿಶ್ವದಿಂದಲೇ ದೂರವಾಗುವಂತೆ ಕಾರ್ಯಕರ್ತರು, ಅಭಿಮಾನಿಗಳು,ಹಿತೈಷಿಗಳು ಮತ್ತು ಊರವರಿಂದ ಆ.16 ರಂದು ವಿಶೇಷ ವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು,ಕಳಿಯ ಗ್ರಾಮ ಶಕ್ತಿ ಕೇಂದ್ರ ಅಧ್ಯಕ್ಷ ಶೇಕರ ನಾಯ್ಕ ಗೇರುಕಟ್ಟೆ, ನ್ಯಾಯತರ್ಫು ಗ್ರಾಮ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಗೌಡ ಕೆರೆಕೊಡಿ,ಕಳಿಯ ಪಂಚಾಯತು ಮಾಜಿ ಸದಸ್ಯರು,ಕಾರ್ಯಕರ್ತರು,ನ್ಯಾಯತರ್ಫು ಹಾಗೂ ಕಳಿಯ ಗ್ರಾಮದ ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.