ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುರುವಾಯನಕೆರೆ ವಲಯದಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ

ಗುರುವಾಯನಕೆರೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುರುವಾಯನಕೆರೆ ವಲಯದಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮತ್ತು ಕ್ರೀಡಾ ಸಮ್ಮಿಲನವನ್ನು ಮದ್ದಡ್ಕದ ಬಂಡಿಮಠ ಕ್ರೀಡಾಂಗಣದಲ್ಲಿ ಆ.15ರಂದು ಹಮ್ಮಿಕೊಳ್ಳಲಾಯಿತು.

ಎಸ್‍ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೊನ್ಸೊ ಪ್ರಾಂಕೋ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣಗೈದರು.ಸಿಎಫ್‍ಐ ರಾಜ್ಯ ಕಾರ್ಯದರ್ಶಿ ಅತಾವುಲ್ಲ ಪುಂಜಾಲಕಟ್ಟೆ ಸಂದೇಶ ಭಾಷಣ ನೀಡಿದರು. ಮುಸ್ತಫ ಜಿ.ಕೆ, ಅಧ್ಯಕ್ಷರು ಎಸ್‍ಡಿಪಿಐ ಬೆಳ್ತಂಗಡಿ ಜಿಲ್ಲೆ, ದಾವುದ್ ಜಿ ಕೆ, ಅಧ್ಯಕ್ಷರು ಪಿಎಫ್‍ಐ ವೇಣೂರ್ ಡಿವಿಶನ್, ಸ್ವಾಲಿ ಮದ್ದಡ್ಕ, ಪಿಎಫ್‍ಐ ಗುರುವಾಯನಕೆರೆ ವಲಯ ಅಧ್ಯಕ್ಷ ರಿಯಾಝ್ ಮದ್ದಡ್ಕ, ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ, ರವೂದ್ ಮದ್ದಡ್ಕ, ಅಧ್ಯಕ್ಷರು ಎಸ್‍ಎಸ್‍ಎಫ್ ಮದ್ದಡ್ಕ ಘಟಕ ಹೆಚ್‍ಎಂ ಹಸನಬ್ಬ,ಮಾಜಿ ಉಪಾಧ್ಯಕ್ಷರು ಎನ್‍ಹೆಚ್‍ಜೆಎಂಜೆ ಮದ್ದಡ್ಕ ಸಿರಾಜ್ ಚಿಲಿಂಬಿ, ಜೊತೆ ಕಾರ್ಯದರ್ಶಿ ಎನ್‍ಎಚ್‍ಜೆಎಂ ಮದ್ದಡ್ಕ ಉಮರಬ್ಬ ಯು ಆರ್, ಕೋಶಾಧಿಕಾರಿ ಎನ್‍ಎಚ್‍ಜೆಎಂ ಮದ್ದಡ್ಕ ಹಾರಿಸ್ ಜಿ ಕೆ, ಕಾರ್ಯದರ್ಶಿ ಪಿಎಫ್‍ಐ ಭಾಗವಹಿಸಿದರು. ಅಸ್ಲಾಮ್ ವಂದಿಸಿದರು. ಕ್ರೀಡಕೂಟವನ್ನು ಇರ್ಫಾನ್ ಕಾವಲಕಟ್ಟೆ ಮತ್ತು ಕರೀಮ್ ಜಿ. ಕೆ ನೆರವೇರಿಸಿ ಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.