ಬೆಂಗಳೂರು ಗಲಭೆಗೆ ಕಾರಣವಾದ ಎಸ್‌.ಡಿ.ಪಿ.ಐ ಸಂಘಟನೆ ನಿಷೇಧಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದಿಂದ ಮನವಿ

Advt_NewsUnder_1
Advt_NewsUnder_1
Advt_NewsUnder_1

ವೇಣೂರು : ರಾಜ್ಯವನ್ನು ಆತಂಕಕ್ಕೆ ತಳ್ಳಿರುವ ಬೆಂಗಳೂರಿನ ಕೆಜಿ ಹಳ್ಳಿ,ಡಿಜೆ ಹಳ್ಳಿ ಗಲಭೆಯ ಹಿಂಸಾಚಾರ ವನ್ನು ಖಂಡಿಸಿ, ದಂಗೆಕೋರ ಸಂಘಟನೆಗಳಾದ ಎಸ್.ಡಿ.ಪಿ.ಐ ಹಾಗೂ ಇತರೆ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ದಾಳಿಕೋರ ವಿದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವೇಣೂರು ಪ್ರಖಂಡ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಪ್ರಮುಖರು ಪರಿವಾರ ಸಂಘಟನೆಗಳ ಹಿರಿಯರ ಜೊತೆಗೂಡಿ ವೇಣೂರು ಆರಕ್ಷಕ ಠಾಣೆ ಯ ಸಬ್ ಇನ್ಸ್ಪೆಕ್ಟರ್ ಲೋಲಾಕ್ಷ ಕೆ ಅವರ ಮೂಲಕ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ್ ಭಟ್, ಆರ್.ಎಸ್.ಎಸ್ ನ ಪ್ರಕಾಶ್ ಪುರೋಹಿತ, ಬಜರಂಗದಳ ಸಂಚಾಲಕ ರಕ್ಷಿತ್ ಬಜಿರೆ,ಪ್ರಮುಖರಾದ ರಾಮ್ ಪ್ರಸಾದ್ ಮರೋಡಿ,ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಉಮೇಶ್ ನಡ್ತಿಕಲ್ಲು, ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ರಮೇಶ್ ಹೆಗ್ಡೆ , ಸುನಿಲ್ ಬಜಿರೆ,ಅವಿನಾಶ್ ಕುರ್ಲೊಟ್ಟು, ಪ್ರಜ್ವಲ್ ವೇಣೂರು, ಪ್ರವೀಣ್ ಗರ್ಡಾಡಿ, ಸಂತೋಷ್ ಕೊಕ್ರಾಡಿ, ಸದಾಶಿವ ,ಪ್ರದೀಪ್ ಕಾಶಿಪಟ್ಣ, ಗೋರಕ್ಷ ಪ್ರಮುಖ್ ಮೋಹನ್ ನಾರಾವಿ ಮತ್ತು ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.