HomePage_Banner_
HomePage_Banner_

ಬೆಳ್ತಂಗಡಿ: ಎಸ್.ಡಿ.ಎಂ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆ

❇️ಮನೆಯಲ್ಲಿದ್ದುಕೊಂಡು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ
❇️ರಸಪ್ರಶ್ನೆ, ಭಾಷಣ ಹಾಗೂ ನೆರೆಮನೆಯವರಿಗೆ ಮಾಸ್ಕ್ ವಿತರಿಸಿ ಜಾಗೃತಿ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸ್ಕೌಟ್ಸ್ ಮತ್ತು ಗೈಡ್ಸ್ ದಳದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚಚರಿಸಲಾಯಿತು. ಮಕ್ಕಳು ಮನೆಯಲ್ಲಿದ್ದುಕೊಂಡು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಯ ಆದೇಶದಂತೆ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಜಾಗೃತಿ ಮೂಡಿಸಿರುತ್ತಾರೆ.

ಕಬ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿಗಳು ಭಾರತ ಭೂಪಟವನ್ನು ರಂಗೋಲಿ ಹಾಕಿ,ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕುಟುಂಬದ ಸದಸ್ಯರೂಂದಿಗೆ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.

ಪ್ರತಿ ಮನೆಯಲ್ಲೂ ಪ್ರತಿ ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿ ಗಳು ರಾಷ್ಟ್ರಗೀತೆ ಯನ್ನು ಹಾಡಿ, ತಮ್ಮ ತಾಲೂಕು/ ಜಿಲ್ಲೆ ಯ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಭಾಷಣವನ್ನು ಮಾಡಿ, ರಾಜ್ಯ ಸಂಸ್ಥೆ ಆಯೋಜಿಸಿದ ರಸಪ್ರಶ್ನೆ ಯಲ್ಲಿ ಭಾಗವಹಿಸಿ,ತಾವೇ ತಯಾರಿಸಿದ ಮಾಸ್ಕ್ ನ್ನು ನೆರೆಹೊರೆಯವರಿಗೆ ನೀಡುವ ಮೂಲಕ ಜಾಗೃತಿ ಮೂಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಶೀಷ್ ಕಾಮತ್, ಯಶ್ಮಿ, ಅನನ್ಯ , ಶ್ರವಣ್, ಶ್ರೀಷ, ಆಕಾಂಕ್ಷ ಶೆಟ್ಟಿ ಮತ್ತು ಅನೇಕ ವಿಧ್ಯಾರ್ಥಿ ಗಳು ಭಾಗವಹಿದಿರುತ್ತಾರೆ

ಇವರಿಗೆ ಶೀ ಧರ್ಮಸ್ಧಳ ಮಂಜುನಾಥೇಶ್ವರ ಶಾಲೆ ಬೆಳ್ತಂಗಡಿಯ ಗೈಡ್ ಕ್ಯಾಪ್ಟನ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಮಾರ್ಗದರ್ಶನ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.