ಲಾಯಿಲ ಗ್ರಾಮದ ಆದರ್ಶ ನಗರದ ಗ್ರಾಮಸ್ಥರಿಂದ 74ನೇ ವರ್ಷದ ಸ್ವಾತಂತ್ರ್ಸೋತ್ಸವ ಆಚರಣೆ

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆದರ್ಶ ನಗರದ ಗ್ರಾಮಸ್ಥರಿಂದ ಸಂಭ್ರಮದ ಸ್ವಾತಂತ್ರೋತ್ಸವ ಗ್ರಾಮದ ಹಿರಿಯರಾದ ಇಸ್ಮಾಯಿಲ್ ರವರು ದ್ವಜಾರೋಹಣ ಗೈದರು. ಸ್ಥಳದಲ್ಲಿ ಲಾಯಿಲ ಪಂಚಾಯತ್ ನ ಮಾಜಿ ಅಧ್ಯಕ್ಷ ಹೆಚ್. ಎಂ. ಮೊಯ್ದಿನಬ್ಬ, ಮಾಜಿ ಪಂಚಾಯತ್ ಸದಸ್ಯರಾದ ಜಗನ್ನಾಥ ರಾವ್, ಮಸೀದಿ ಅದ್ಯಕ್ಷ ಅಝೀಝ್,  ಮಾಜಿ ಅದ್ಯಕ್ಷ ಬದ್ರುದ್ದೀನ್ ಹಾಗು ಹನೀಫ್  ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜನಾಬ್ ಝಮೀರ್ ಸಅದಿ ಆದರ್ಶ ನಗರ.ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಸ್ಥಳೀಯ ವಿಧ್ಯಾರ್ಥಿನಿಯರಿಂದ ರಾಷ್ಟ್ರಗೀತೆಯೊಂದಿಗೆ ನೆರೆದ ಗ್ರಾಮಸ್ಥರಿಗೆ ವಂದನಾರ್ಪಣೆ ಯೊಂದಿಗೆ.ಹಮೀದ್ ಆರೋಗ್ಯ ರಕ್ಷಾ ಅಂಬುಲೆನ್ಸ್ ವತಿಯಿಂದ ಪ್ರತೀ ವರ್ಷ ನೀಡಲಾಗುವ ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.