ಸರಕಾರಿ ಶಾಲೆಗಳ ಪೈಕಿ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶೈವಿ; ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ವಿದ್ಯಾರ್ಥಿನಿ ಭೇಟಿ ನೀಡಿ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಎಸ್ಸೆಸ್ಸೆಲ್ಸ್ ಪರೀಕ್ಷೆಯಲ್ಲಿ 620 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ, ಹಾಗೂ ಸರಕಾರಿ ಶಾಲೆಗಳ ಪೈಕಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶೈವಿ ಅವರ ಮನೆಗೆ ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ನಗದು ಪ್ರೋತ್ಸಾಹಧನದೊಂದಿಗೆ ಸನ್ಮಾನಿಸಿದರು.

ಬಳಿಕ ಮಾತನಾಡಿದ ಹರೀಶ್ ಕುಮಾರ್ ಅವರು, ಬಡತನದ ಮಧ್ಯೆಯೂ ಯಾವುದೇ ತರಬೇತಿಗಳಿಲ್ಲದೆ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಮತಷ್ಟು ಯಶಸ್ಸು ಸಿಗುವಂತಾಗಳಿ ಎಂದು ಶುಭಹಾರೈಸಿದರು.ಹಾಗೂ 607 ಅಂಕ ಪಡೆದ ಅದ್ದೇ ಶಾಲೆಯ ವಿದ್ಯಾರ್ಥಿನಿ ಅಶ್ವಿನಿ ಅವರನ್ನೂ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ತಾ. ಪಂ. ಪ್ರವೀಣ್ ಗೌಡ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಜ್ವಲ್ ಕುಮಾರ್ ಪಾಂಬೇಲು, ಶಾಲಾ ಶಿಕ್ಷಕರಾದ ರಾಮಚಂದ್ರ ದೊಡ್ಡಮಣಿ ಹಾಗೂ ಸುಧಾಕರ್ ಶೆಟ್ಟಿ, ಈಶ್ವರಪ್ಪ ಗೌಡ, ಸುಧಾಕರ್ ಪಿಜಕ್ಕಳ, ಲೋಕೇಶ ಪಾಂಬೇಲು, ನವೀನ್ ಕುಮಾರ್, ಶೇಖರ್ ಹೇಮಲ್ಕೆ ನಾರಾಯಣ ಮಲೆಬೆಟ್ಟು, ದೇವರಾಜ್ ಗೌಡ, ಸುರೇಶ್ ಬಜಿಲ, ಡೀಕಯ್ಯ ಪೂಜಾರಿ, ಮಾಯಿಲಪ್ಪ ಗೌಡ, ದೀಕ್ಷಿತ್ ಕುಮಾರ್, ಸುಜಿತ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊಯ್ಯೂರು ಶಾಲಾ ಶಿಕ್ಷಕರಾದ ರಾಮಚಂದ್ರ ದೊಡ್ಡಮಣಿ ಸ್ವಾಗತಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.