ಶಾಲಾ ಸಮಾಲೋಚನೆಯ ಅಗತ್ಯ ಮತ್ತು ಪ್ರಾಮುಖ್ಯತೆ

Advt_NewsUnder_1
Advt_NewsUnder_1
Advt_NewsUnder_1

✍️ ಡಾ. ಅಕ್ಷತಾ ಕೆ.
ಸಹಾಯಕ ಪ್ರಾಧ್ಯಾಪಕಿ, ಸಮಾಜ ಕಾರ್ಯ ವಿಭಾಗ, ಎಸ್.ಡಿ.ಎಂ. ಕಾಲೇಜು ಉಜಿರೆ

ಇಂದಿನ ಮಕ್ಕಳು ಇಂದಿನ ನಾಗರಿಕರು. ಅವರು ಬೆಳೆಯಲು ಆರೋಗ್ಯ ಮತ್ತು ಶಾಂತಿಯುತ ವಾತಾವರಣ ಅಗತ್ಯ. ಶಾಲೆ ಮತ್ತು ಮನೆಯಲ್ಲಿ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಒದಗಿಸುವುದು ಈ ಎರಡು ಸಂಸ್ಥೆಗಳ ಜವಾಬ್ದಾರಿಯಾಗಿದೆ.

ಪೋಷಕರು ಮತ್ತು ಶಿಕ್ಷಕರು ಮಕ್ಕಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಈ ಮೊದಲು, ಮಕ್ಕಳ ಅಗತ್ಯಗಳನ್ನು ಪೂರೈಸಲು ಜನರು ಲಭ್ಯವಿರುವ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ನಾವು ಹೊಂದಿದ್ದೆವು. ಕ್ರಮೇಣ, ತಾಂತ್ರಿಕ ಅಭಿವೃದ್ಧಿ ಮತ್ತು ಆಧುನೀಕರಣದಿಂದಾಗಿ, ಸಾಮಾಜಿಕ ಸಂಸ್ಥೆಗಳ ಪಾತ್ರ ಬದಲಾಯಿತು. ಕುಟುಂಬಗಳು ವಿಘಟನೆಯಾಗಿ ವಿಭಕ್ತ ಕುಟುಂಬಗಳು ಚಾಲ್ತಿಗೆ ಬಂದವು. ಈ ಬದಲಾವಣೆಗಳು ಎರಡೂ ಪರಿಸರದಲ್ಲಿ ಅನುಕೂಲಗಳು ಮತ್ತು ಅನಾನುಕೂಲಗಳಿಗೆ ಕಾರಣವಾಯಿತು. ಮಕ್ಕಳಿಗೆ ಮನೆಯಲ್ಲಿ ತಂದೆ- ತಾಯಿ, ಶಾಲೆಯಲ್ಲಿ ಶಿಕ್ಷಕರ ಒಡನಾಟ ಮಾತ್ರ ಸಿಗುವಂತಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ, ಭಾವನಾತ್ಮಕ ಬೆಳವಣಿಗೆಯ ಜವಾಬ್ಧಾರಿಯೂ ಶಿಕ್ಷಕರ ಕರ್ತವ್ಯವಾಯಿತು. ಪ್ರಸ್ತುತ ಶಾಲೆಯಲ್ಲಿ, ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಹಾಯ ಮಾಡುವುದು ಶಿಕ್ಷಕರ ಆದ್ಯತೆಯಾಗಿದೆ. ಆದಾಗ್ಯೂ, ಅವರು ಬೋಧನೆ, ಪರೀಕ್ಷೆಗಳನ್ನು ನಡೆಸುವುದು, ಯೋಜನಾ ಕಾರ್ಯಗಳನ್ನು ನಿರ್ವಹಿಸುವುದು, ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವುದು, ಪೋಷಕರ ಸಭೆ ನಡೆಸುವುದು ಮತ್ತು ಒಂದು ನಿರ್ದಿಷ್ಟ ಪ್ರಮಾಣದ ಆಡಳಿತಾತ್ಮಕ ಕಾರ್ಯಗಳಂತಹ ಇನ್ನೂ ಅನೇಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ಧಾರಿಯಿದೆ..

ಆದ್ದರಿಂದ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಎದುರಿಸಲು ಮತ್ತು ಮಗುವಿನ ಹಿತದೃಷ್ಟಿಯಿಂದ ಶಾಲೆಯಲ್ಲಿ ಪೂರಕವಾದ ವ್ಯವಸ್ಥೆಯ ಅಗತ್ಯವಿದೆ. ಅದನ್ನು ಶಾಲಾ ಸಮಾಲೋಚನೆ ಎಂದು ಕರೆಯಬಹುದು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ವಿಧಾನ ಶಾಲಾ ಸಮಾಲೋಚನೆ ಅಥವಾ ಆಪ್ತಸಮಾಲೋಚನೆ. ಶಾಲಾ ಸಲಹೆಗಾರನು ಅವನ / ಅವಳ ವೃತ್ತಿಪರ ಪರಿಣತಿಯೊಂದಿಗೆ ಈ ಕಾರ್ಯಗಳನ್ನು ನಿರ್ವಹಿಸಬಹುದು. ಆದ್ದರಿಂದ, ಎಲ್ಲಾ ರೀತಿಯ ಶಾಲೆಗಳಲ್ಲಿ ಶಾಲಾ ಸಲಹೆಗಾರರನ್ನು ನೇಮಿಸುವ ಅವಶ್ಯಕತೆಯಿದೆ. ಸಮಾಲೋಚನೆಯ ನೇರ ಫಲಾನುಭವಿಗಳು ಶಾಲಾ ಮಕ್ಕಳಾಗಿದ್ದರೂ, ಶಾಲಾ ವ್ಯವಸ್ಥೆಯ ಎಲ್ಲಾ ಪಾಲುದಾರರು ಈ ಸೇವೆಯಿಂದ ಪರೋಕ್ಷವಾಗಿ ಪ್ರಯೋಜನ ಪಡೆಯುತ್ತಾರೆ.

ಮಗುವಿನ ಹಿತದೃಷ್ಟಿಯಿಂದ ಶಾಲಾ ಸಮಾಲೋಚನೆ ಸೇವೆಗಳನ್ನು ನೀಡುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಪಾಲುದಾರರು ತಮ್ಮ ಪಾತ್ರಗಳನ್ನು ಅರಿತುಕೊಳ್ಳಬೇಕು. ಶಾಲೆಗಳಲ್ಲಿ ಸಮಗ್ರ ಮತ್ತು ಸಮನ್ವಯದ ಯೋಜನೆ ಅಗತ್ಯ. ಇದು ಮಗುವಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ, ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಅಭಿವೃದ್ಧಿಗೆ ಅನುಕೂಲವಾಗುವುದು. ಶಿಕ್ಷಣವು ಮಗುವಿನ ವೈಯಕ್ತಿಕ ಪ್ರಗತಿಯತ್ತ ಗಮನಹರಿಸಲು ಆಪ್ತಸಮಾಲೋಚನೆ ಸಹಾಯಮಾಡುವುದು.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಮಿಷನ್ ಹೇಳಿಕೆಯಂತೆ, ‘ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಹಾಗೂ ಗುಣಮಟ್ಟದ ಮಾನವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಬಹಳ ಮುಖ್ಯವಾಗಿರುತ್ತದೆ. ಇದಲ್ಲದೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಅನುವು ಮಾಡಿಕೊಡುವ ಗುರಿ ಶಿಕ್ಷಣಕ್ಕಿದೆ. ಆದರೂ ಸಂಶೋಧನಾ ಅಧ್ಯಯನಗಳ ಪ್ರಕಾರ ಈ ಶೈಕ್ಷಣಿಕ ಕಾರ್ಯಕ್ರಮಗಳು ಪರಸ್ಪರ ಅಥವಾ ಅಂತರ್ವ್ಯಕ್ತೀಯ ಮಟ್ಟದಲ್ಲಿ ಅಥವಾ ಎರಡೂ ಹಂತಗಳಲ್ಲಿ ತೊಂದರೆಗೀಡಾದ ವಿದ್ಯಾರ್ಥಿಗಳಿಗೆ ಸ್ವಯಂ-ಅನ್ವೇಷಣೆ ಮತ್ತು ಸ್ವಯಂ-ಬೆಳವಣಿಗೆಗಾಗಿ ಅವಕಾಶ ನೀಡುವುದು ಕಷ್ಟ ಎಂದು ಧೃಡಪಡಿಸುತ್ತದೆ. ಈ ಉದ್ದೇಶವನ್ನು ಸಾಧಿಸಲು, ಮಕ್ಕಳ ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ವೈಜ್ಞಾನಿಕ ವಿಧಾನದ ಅಗತ್ಯವನ್ನು ಶಾಲಾ ಶಿಕ್ಷಣ ಇಲಾಖೆ ಅರಿತುಕೊಳ್ಳಬೇಕು. ಶಾಲಾ ಸಮಾಲೋಚನೆಯು ಶಾಲಾ ಮಟ್ಟದಲ್ಲಿ ಅಂತಹ ಸೇವೆಗಳನ್ನು ಒದಗಿಸುತ್ತದೆ. ಮತ್ತಷ್ಟು; ಶಾಲಾ ಸಲಹೆಗಾರರು ವಿದ್ಯಾರ್ಥಿಗಳ ಸಮಸ್ಯೆಗಳತ್ತಕಾಳಜಿ ವಹಿಸಿದರೆ, ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ಗಮನಹರಿಸಲು ಸಾಕಷ್ಟು ಸಮಯವನ್ನು ಪಡೆಯಬಹುದು. ಅದೇ ಸಮಯದಲ್ಲಿ ಶಾಲಾ ಸಲಹೆಗಾರನು ಮಕ್ಕಳ ಬದಲಾಗುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ನಿಭಾಯಿಸುವ ವಿಧಾನಗಳಲ್ಲಿ ಅಗತ್ಯವಾದ ಮಾರ್ಪಾಡುಗಳನ್ನು ತರಲು ಶ್ರಮಿಸಬಹುದು. ಈ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿಯೂ ಆಪ್ತ ಸಮಾಲೋಚನಾಗಾರರ ಅಗತ್ಯವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.