ಕೊಕ್ಕಡ: ಸರಕಾರಿ ಅರಣ್ಯ ಪ್ರದೇಶದಲ್ಲಿ ಜುಗಾರಿ ಆಡುತ್ತಿದ್ದ 14 ಮಂದಿ ಅಂದರ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಧರ್ಮಸ್ಥಳ ಠಾಣೆಯ ಉಪ ನಿರೀಕ್ಷಕರು ಪವನ್ ನಾಯಕ್ ನೇತೃತ್ವದಲ್ಲಿ ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶ ತಲುಪಿ ನೋಡಿದಾಗ ಅರಣ್ಯ ಪ್ರದೇಶದಲ್ಲಿ ಟರ್ಪಾಲ್‌ನ್ನು ಕಾಡು ಮರದ ಕೊಂಬೆಗೆ ಕಟ್ಟಿ ನೆಲದ ಮೇಲೆ ಪ್ಲಾಸ್ಟಿಕ್ ಹಾಸಿ ಜನರು ಸುತ್ತಲೂ ಕುಳಿತು ಕೊಂಡು ಕ್ಯಾಂಡಲ್ ಬೆಳಕಿನ ಸಹಾಯದಿಂದ ಜುಗಾರಿ ಆಟ ಆಡುತ್ತಿರುವುದಾಗಿ ಕಂಡ ಬಂದ ಮೇರೆಗೆ ಹತ್ತಿರಕ್ಕೆ ಬಂದಾಗ ಸಮವಸ್ತ್ರದಲ್ಲಿ ಪೊಲೀಸ್ ರವರನ್ನು ಕಂಡಾಗ ಅವರು ಕುಳಿತಲ್ಲಿಂದ ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದಲ್ಲಿ ಅವರ ಪೈಕಿ  ಸುಧಾಕರ, ಅಬ್ದುಲ್ ಖಾದರ್, ಸುಬ್ರಾಯ ಗೌಡ,  ಅಬ್ದುಲ್ ಲತೀಫ್ ರವರು ವಶಕ್ಕೆ ಪಡೆದುಕೊಂಡು ಅವರನ್ನು ವಿಚಾರಿಸಲಾಗಿ ಓಡಿ ತಪ್ಪಿಸಿಕೊಂಡವರ ಹೆಸರು ರತ್ನಾಕರ, ಫಾರೂಕ್ ಉಪ್ಪಿನಂಗಡಿ, ಸಾದೀಕ್,  ಮಹೇಶ ಪೊಟ್ಲಡ್ಕ, ಅಬ್ಬುಂಞ,  ರೋಹಿತ್ ಆಲಂಕಾರು, ರಾಜು,  ಅಶ್ವಥ್  ಭುವನೇಶ್ವರ್ ಕಳೆಂಜ, ರೋಹಿತ್ ಕಳೆಂಜ ಎಂಬುವುದಾಗಿ ತಿಳಿಸಿರುತ್ತಾರೆ.

ಆರೋಪಿಗಳ ವಶದಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ರೂಪಾಯಿ 6,185/- ನಗದು, 52 ಇಸ್ಪೀಟ್ ಎಲೆ, ಮತ್ತು ಮತ್ತು ನಾಲ್ಕು ತುಂಡು ಕ್ಯಾಂಡಲ್ ಮತ್ತು ಅಡಿಗೆ ಹಾಸಲು ಬಳಸಿದ ಒಂದು ಪ್ಲಾಸ್ಟಿಕ್ ಸಾಮಾಗ್ರಿ, ಮಳೆನೀರು ಬೀಳದಂತೆ ಕಟ್ಟಿದ ಪ್ಲಾಸ್ಟಿಕ್ ಟರ್ಪಾಲ್ ಕೆಎ-04-ಎಂಜೆ-1755 ನೇ ನಂಬ್ರದ ಕಾರು ಇದರ ಅಂದಾಜು ಮೌಲ್ಯ 1,50,000/-ರೂ ಆಗಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.