ಕಾಳಜಿ ರಿಲೀಫ್ ಫಂಡ್ ಗೆ ಬಂದ ಹಣದ ಬಗ್ಗೆ ತನಿಖೆ ನಡೆಯಲಿ; ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಒಂದು ವರ್ಷದ ಹಿಂದೆ ತಾಲೂಕಿನಲ್ಲಿ ನೆರೆ ಬಂದಾಗ ಶಾಸಕರೇ ಸ್ವಯಂ ಆಗಿ ರಚಿಸಿಕೊಂಡಿರುವ ಕಾಳಜಿ ರಿಲೀಫ್ ಫಂಡ್‌ಗೆ ಎಷ್ಟುಕೋಟಿ ಬಂದಿದೆ. ಅದನ್ನು ಯಾವ ಸಂತ್ರಸ್ಥರಿಗೆ ಹಂಚಲಾಗಿದೆ. ಈ ಬಗ್ಗೆ ಸ್ಪಷ್ಟವಾದ ಲೆಕ್ಕಚಾರಗಳಿಲ್ಲದ ಕಾರಣ ಸಾರ್ವಜನಿಕರಿಗೆ ಸಂಶಯ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕೆಂದು ನಾವು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರೆದುಕೊಂಡಿರುವುದಾಗಿ ಮಾಜಿ ಶಾಸಕ ವಸಂತ ಬಂಗೇರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೇ ದೂರನ್ನು ಗವರ್ನರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ರಿಗೆ ಕೂಡಾ ಕಳುಹಿಸಿ ಕೊಡುವುದಾಗಿ ಹೇಳಿದರು.

ಆ.11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರರು ದೂರು ನೀಡುವ ವಿಷಯ ಬಹಿರಂಗ ಪಡಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರ್ಷ ನೆರೆ ಬಂದು ಅಪಾರ ನಷ್ಟಗಳುಂಟಾಗಿತ್ತು. ಈ ವಿಚಾರ ತಿಳಿದು ತಾವು ಈ ಭಾಗಕ್ಕೆ ಭೇಟಿ ನೀಡಿದ್ದು, ಹಲವಾರು ಮನೆಗಳು, ಜಮೀನು ಇತ್ಯಾದಿ ಕೊಚ್ಚಿಕೊಂಡು ಹೋಗಿದ್ದು ಅಂತವರಿಗೆ ಇನ್ನೂ ಕೂಡಾ ಸೂಕ್ತ ನೆಲೆ ಸರಕಾರದ ವತಿಯಿಂದ ನೀಡಲಾಗಿಲ್ಲ. ಹೀಗಿರುವಲ್ಲಿ ಕಳೆದ ವರ್ಷದ ನೆರೆಯ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ – ಸಂಸ್ಥೆಗಳು, ನೆರೆ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದಾರೆ. ಆದರೆ ರಾಜ್ಯದ ಯಾವ ಶಾಸಕರು ವೈಯಕ್ತಿಕ ನೆಲೆಯಲ್ಲಿ ಹಣ ಸಂಗ್ರಹಣೆ ಮಾಡಿದ ಉದಾಹರಣೆ ಇಲ್ಲ. ಈ ರೀತಿ ಹಣ ಸಂಗ್ರಹಣೆ ಮಾಡಲು ಕಾನೂನಿನಲ್ಲಿ ಅವಕಾಶವೂ ಇಲ್ಲ. ಸರಕಾರ ಒಂದು ವೇಳೆ ಒಂದು ಸಮಿತಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಕಳೆದ ವರ್ಷ ತಮ್ಮ ವೈಯಕ್ತಿಕ ನೆಲೆಯಲ್ಲಿ ತನ್ನನ್ನೇ ತಾನು ಅಧ್ಯಕ್ಷನೆಂದು ಘೋಷಿಸಿಕೊಂಡು ಕಾಳಜಿ ರಿಲೀಫ್ ಫಂಡ್ ಮಾಡಿ ಅದಕ್ಕೊಂದು ಸಮಿತಿಯನ್ನು ರಚಿಸಿ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿದ್ದಾರೆ.
ಕಳೆದ ವರ್ಷ ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಕೂಡಾ ಸೂಕ್ತ ನೆರೆ ಪರಿಹಾರ ನೀಡದೆ ಇದ್ದು ಇದರಿಂದಾಗಿ ಸಂತ್ರಸ್ಥರು ತೀರ ತೊಂದರೆಗೀಡಾಗಿದ್ದಾರೆ. ಕೆಲವರಿಗೆ ಮಾತ್ರ ಮನೆ ಮಂಜೂರಾಗಿದ್ದು ಅದರ ಕಂತು ಕೂಡಾ ಸಮರ್ಪಕವಾಗಿ ದೊರಕಿಲ್ಲ. ಹಲವಾರು ಮನೆಗಳ ನಿರ್ಮಾಣ ಕಾರ್ಯ ಬಾಕಿಯಾಗಿದೆ.

ನೆರೆಯ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋದ ಸೇತುವೆಯ ಕೆಲಸಗಳು ಕೂಡ ಆಗಿರುವುದಿಲ್ಲ. ಕೆಲವೊಂದು ಕಾಮಗಾರಿಗಳಿಗೆ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿರುವುದಾಗಿ ಶಾಸಕರು ಹೇಳಿಕೊಳ್ಳುತ್ತಿದ್ದು ಯಾವ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ.ಇದೆಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ನಾವು ಬರೆದುಕೊಂಡಿರುವುದಾಗಿ ವಸಂತ ಬಂಗೇರರು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್, ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.