ಬಳಂಜ ಸ.ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ವಿಶೇಷ ಪ್ರಯತ್ನ ವಿದ್ಯಾರ್ಥಿಗಳಿಗೆ ಮನೆ ಮನೆಗೆ ತೆರಳಿ ಪಾಠ

Advt_NewsUnder_1
Advt_NewsUnder_1
Advt_NewsUnder_1

 

ಬಳಂಜ: ತಾಲೂಕಿನ ಅತ್ಯಂತ ಹಿರಿಯ ವಿದ್ಯಾಸಂಸ್ಥೆಗಳಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಬಳಂಜ ಕೂಡ ಒಂದು. ಪಾಠ, ಆಟ, ಕಲೆ, ಸಾಹಿತ್ಯ ಹಾಗೂ ಇತರ ಚಟುಚಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ತಾಲೂಕಿನಲ್ಲಿ ಗಮನ ಸೆಳೆದಿದ್ದಾರೆ.

ಕೋವಿಡ್ ಹಿನ್ನಲೆಯಲ್ಲಿ ಶಾಲೆ ಮರೆತಿರುವ ಮಕ್ಕಳ ಶಿಕ್ಷಣ ಮುಂದುವರಿಯಲು ಶಿಕ್ಷಣ ಇಲಾಖೆ ರೂಪಿಸಿರುವ ವಿದ್ಯಾಗಮ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮನೆ ಬಾಗಿಲಿಗೆ ಬಂದು ಪಾಠ ಹೇಳುವ ಶಿಕ್ಷಕರನ್ನು ಕಂಡು ಮಕ್ಕಳು ಖುಷಿಯಲ್ಲಿಯೇ ಸ್ವಾಗತಿಸಿ ಪಾಠ ಕೇಳುತ್ತಿದ್ದಾರೆ.  
ಕಳೆದ ಕೆಲ ಸಮಯದಿಂದ ಬಳಂಜ ಶಾಲಾ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ ಹೇಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಯಲ್ಲಿ ೧ ರಿಂದ ೧೦ರವರೆಗೆ ಸುಮಾರು ೨೧೧ ವಿದ್ಯಾರ್ಥಿಗಳಿದ್ದು ಮುಖ್ಯ ಶಿಕ್ಷಕಿ ಸತ್ಯವತಿ, ವಿಲ್ಫ್ರೆಡ್ ಪಿಂಟೋ, ಪ್ರತಿಮಾ ನಾಯಕ್, ಮಲ್ಲಿಕಾರ್ಜುನಾ, ಸುಕನ್ಯಾ, ನೇಮಮ್ಮ, ಗ್ರೇಟಾ ಮರಿಯಾ ಡಿಮೆಲ್ಲೊ, ರೆನಿಲ್ಡಾ, ಗಣೇಶ್, ರೂಪಾ, ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಪಾಠ ಹೇಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.