ಗರ್ಡಾಡಿ: ಸರಳವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗರ್ಡಾಡಿ: ಯುವಕ ಮಂಡಲ ಗರ್ಡಾಡಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ಸರಳವಾಗಿ ಆ 11 ರಂದು ಆಚರಿಸಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಪಡಂಗಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಲಿಯೋ ಸೇರಾವೋ, ಅಧ್ಯಕ್ಷ ಪ್ರಶಾಂತ್ ಸುವರ್ಣ, ಉಪಾಧ್ಯಕ್ಷ ಹರೀಶ್ ಶಾಂತಿ ಬೆಟ್ಟು , ಸಿಎಂ ಬ್ಯಾಂಕಿನ ನಿರ್ದೇಶಕ ಶ್ರೀಧರ್ ಪೂಜಾರಿ ಪರಿಮುಖ,ಲಿಯೋ ಸಿಕ್ವೇರಾ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೆಲ್ವಿನ್ ಸಿಕ್ವೇರಾ, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ನಿರೂಪಿಸಿ, ವಂದಿಸಿದರು. ಕೊರೊನಾ ಹಿನ್ನಲೆಯಲ್ಲಿ ಯಾವುದೇ ಆಟೋಟ ಸ್ಪರ್ಧೆ ನಡೆಸದೆ ಊರಿನ ಪ್ರಮುಖರ ಸಮ್ಮುಖದಲ್ಲಿ ದೀಪಬೆಳಗಿಸಿ, ಸಂಘದ ಪದಾಧಿಕಾರಿಗಳು ಸೇರಿ ಚಾಮುಂಡ್ಡೇಶ್ವರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.