ಕೊಲ್ಲಿ ನಡ್ತಿಕಲ್ಲು ಅರಣ್ಯ ಪ್ರದೇಶದಲ್ಲಿ ಭೂ ಕುಸಿತ; 4 ಎಕ್ರೆ ಪ್ರದೇಶದಲ್ಲಿ ಕೆಳಗೆ ಜಾರಿದ ಮಣ್ಣು

Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಆ.10 ರಂದು ಸಂಜೆ ಭೂ ಕುಸಿತ ಉಂಟಾಗಿದ್ದು, ಸುಮಾರು 4 ಎಕ್ರೆ ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿರುವುದು ಕಂಡು ಬಂದಿದೆ.


ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತದಿಂದ ಈ ಘಟನೆ ನಡೆದಿರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶವಾಗಿದ್ದು, ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿದೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮಾಹಿತಿ ಒದಗಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.