ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ವಿಶೇಷ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

❇️ಬೆಳೆಸಾಲ ಪಡೆದ ರೈತರಿಗೆ ಉಚಿತ ಮೈಲುತುತ್ತು
❇️1 ಸಾವಿರ ಸದಸ್ಯರಿಗೆ ಪ್ರಯೋಜನ, ರೂ6 ಲಕ್ಷ ವೆಚ್ಚ

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿಯಲ್ಲಿ ರೈತರಿಗೆ ಉಚಿತ ಮೈಲ್ ತುತ್ತು ವಿತರಿಸಲಾಯಿತು. ಅಳದಂಗಡಿ ಸಹಕಾರಿ ಸಂಘದ ವತಿಯಿಂದ ಬೆಳೆಸಾಲ ಪಡೆದ ಸದಸ್ಯರಿಗೆ ಎಕರೆಯೊಂದಕ್ಕೆ ಒಂದು ಕೆಜಿಯಂತೆ ( ಗರಿಷ್ಟ 3ಕೆಜಿ ) ಮೈಲುತುತ್ತು, ಸುಮಾರು 1250 ಸದಸ್ಯರಿಗೆ ಅಂದಾಜು ರೂ 6 ಲಕ್ಷ ಮೊತ್ತದ ಮೈಲುತುತ್ತು ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಶಿವಭಟ್, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ನಿರ್ದೆಶಕರಾದ ಹೆಚ್ ಧರ್ಣಪ್ಪ ಪೂಜಾರಿ,ಪ್ರಶಾಂತ್ ಬೊಳ್ಳಿಮಾರ್,ಬಾಲಕೃಷ್ಣ ಪೂಜಾರಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೀರಾ, ನಿರ್ದೆಶಕರುಗಳು , ಸಿಬ್ಬಂದಿ ವರ್ಗದವರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.