ಕುವೆಟ್ಟು: ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವಸ್ತುಗಳು

Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಇಲ್ಲಿಯ ಗ್ರಾಮ ಪಂಚಾಯತಿಗೆ ಒಳಪಟ್ಟ ಮದ್ದಡ್ಕ ಪೇಟೆಯ ಸ್ವಲ್ಪ ಮುಂದೆ ನೆರಳಕಟ್ಟೆ ಸಮೀಪವಿರುವ ‘ಸುಲ್ತಾನ್ ಗುರಿ ಪ್ರದೇಶದಲ್ಲಿ ತ್ಯಾಜ್ಜ ವಸ್ತುಗಳನ್ನು ಹಾಕಬಾರದು ಎಂಬ ಫಲಕ ಇದ್ದರು ಅದನ್ನು ನಿರ್ಲಕ್ಷಿಸಿ ಕೋಳಿಯ ವೇಸ್ಟೇಜ್ ಮತ್ತು ಎಲ್ಲಾ ರೀತಿಯ ಘನ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿಯೇ ಎಸೆಯುತ್ತಿರುವುದು ಕಂಡು ಬರುತ್ತಿದೆ.

ಮಳೆಗಾಲವಾದುದ್ದರಿಂದ ಮಳೆಯ ನೀರು ಹೋಗಲು ಸರಿಯಾದ ತೋಡುಗಳ ವ್ಯವಸ್ಥೆ ಇಲ್ಲದಿರುದರಿಂದ ಆ ನೀರು ತ್ಯಾಜ್ಜ ವಸ್ತುಗಳೊಂದಿಗೆ ಬೆರೆತು ದುರುವಾಸನೆ ಬೀರುತ್ತಿದೆ. ಆ ಪರಿಸರದ ಜನರು ಹಗಲೆಲ್ಲ ಕರೋನಕ್ಕೆ ಹೆದರಿ ಮಾಸ್ಕ್ ಧರಿಸಿದರೆ ರಾತ್ರಿಯೆಲ್ಲಾ ಈ ದುರುವಾಸನೆಗೆ ಮೂಗಿಗೆ ಕೈಯಿಟ್ಟು ಬದುಕುವ ದುರವಸ್ಥೆ ಬಂದ್ದಿದೆ. ಪ್ರಸ್ತುತ ಕೋರೋನದಿಂದ ತತ್ತರಿಸಿದ ಜನರಿಗೆ ಇನ್ನೊಂದು ಹೊಸ ರೋಗಕ್ಕೆ ತುತ್ತಾಗುವ ಮೊದಲು ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಸೂಕ್ತ ಪರಿಹಾರವನ್ನು ಕಲ್ಪಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.