HomePage_Banner_
HomePage_Banner_

ಶಿಶಿಲ: ಕಿಂಡಿ ಅಣ್ಣೆಕಟ್ಟಿನಲ್ಲಿ ಸಿಲುಕಿದ ಮರಗಳ ತೆರವು

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದ ಬಳಿ ಇರುವ ಕಿಂಡಿ ಅಣೆಕಟ್ಟಿನಲ್ಲಿ ಆ.6 ರಂದು ಸುರಿದ ಭಾರಿ ಮಳೆಗೆ ಕಪಿಲಾ ನದಿಯಲ್ಲಿ ತೇಲಿ ಬಂದ ಮರಗಳು ಸಿಕ್ಕಿಹಾಕಿಕೊಂಡು ನೀರು ಹರಿಯಲು ಅಡಚಣೆಯಾಗಿದ್ದು ಪಕ್ಕದ ತೋಟಗಳಿಗೆ ನುಗ್ಗುವ ಸಂಭವವಿದ್ದು, ಶಾಸಕ ಹರೀಶ್ ಪೂಂಜ ಸೂಚನೆ ಮೇರೆಗೆ ಸ್ಥಳೀಯರು ಹಾಗೂ ಅರಣ್ಯಾಧಿಕಾರಿ ಪ್ರಶಾಂತ್ ಆಗಮಿಸಿ ಮರವನ್ನು ತೆರವುಗೊಳಿಸಲು ಕ್ರಮಕೈಗೊಂಡರು. ಆದರೆ ಆ.7 ರಂದು ಸಂಜೆ ಮಳೆಗೆ ಪುನಃ ಮರಗಳು ಸಿಲುಕಿಕೊಂಡಿದ್ದು, ಆ.8 ರಂದು ಮರಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಸ್ಥಳಕ್ಕೆ ತಾ.ಪಂ ಮುಖ್ಯಾಧಿಕಾರಿ ಕುಸುಮಾಧರ, ಧರ್ಮಸ್ಥಳ ಠಾಣಾ ಸಬ್ ಇನ್ಸ್ ಸ್ಟೆಕ್ಟರ್ ಪವನ್ ಕುಮಾರ್, ಗ್ರಾಮಕರಣಿಕ ಪರಮೇಶ್, ಆಗಮಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.