ಪಿಡಿಒಗೆ ಕೊರೊನಾ ಸೋಂಕು ದೃಢ: ಎರಡು ಗ್ರಾ.ಪಂ ಸೀಲ್‍ಡೌನ್

ಬೆಳ್ತಂಗಡಿ: ಗ್ರಾ.ಪಂ ಪಿಡಿಒ ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಕಂಡು ಬಂದ ಹಿನ್ನಲೆಯಲ್ಲಿ ತಣ್ಣಿರುಪಂತ ಮತ್ತು ಮಚ್ಚಿನ ಗ್ರಾ.ಪಂನ್ನು ಸ್ಯಾನಿಟೈಸರ್ ಮಾಡಿ ಸೀಲ್ ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ. ಆ.7 ರಂದು ತಣ್ಣೀರುಪಂತದಲ್ಲಿ ನಡೆದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್‍ನಲ್ಲಿ ಇವರಿಬ್ಬರು ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಪಾಸಿಟೀವ್ ಆಗಿ ಬಂದಿದೆ. ಇದರಿಂದಾಗಿ ಅವರು ಕೆಲಸ ಮಾಡುತ್ತಿದ್ದ ಎರಡು ಪಂಚಾಯತುಗಳನ್ನು ಸ್ಯಾನಿಟೈಸರ್ ಮಾಡಿ ಸೋಮವಾರದ ವರೆಗೆ ಸೀಲ್‍ಡೌನ್ ಮಾಡಲಾಗಿದೆ. ಅವರನ್ನು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.