ಸಾವ್ಯ:1008 ದೀಪ ಬೆಳಗುವ ಮೂಲಕ ಅಯೋಧ್ಯೆ ಭೂಮಿ ಪೂಜೆಯ ಸಂಭ್ರಮಾಚರಣೆ ಮತ್ತು ಕರಸೇವಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಸಾವ್ಯ : ಸಮಸ್ತ ಹಿಂದು ಸಂಘಟನೆಗಳ ಆಶ್ರಯದಲ್ಲಿ ಅಯ್ಯಪ್ಪ ಸ್ವಾಮಿ ಭಜನ ಮಂದಿರ ಸಾವ್ಯದಲ್ಲಿ ಅಯೋಧ್ಯೆಯ ಭೂಮಿ ಪೂಜೆಯ ಸಂಭ್ರಮಾಚರಣೆಯನ್ನು 1008 ದೀಪ ಬೆಳಗಿಸುವ ಮೂಲಕ ಆ.5 ರಂದು ಆಚರಿಸಲಾಯಿತು.
ಅಯೋಧ್ಯೆಯ ಕರಸೇವೆಗೆ ಸಾವ್ಯ ಗ್ರಾಮದಿಂದ ತೆರಳಿದ್ದ ಬಾಲಕೃಷ್ಣ ಪೆರಾಡಿ ಮತ್ತು ದಿ. ಬಿರ್ಮಾಣ ಪೂಜರಿಯವರ ಧರ್ಮ ಪತ್ನಿ ಶ್ರೀಮತಿ ಗಿರಿಜಾ ರವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಸೇವಾ ಪ್ರಮುಖ್ ನರಸಿಂಹ ಬಂಟ್ವಾಳ್ ಬೌದ್ದಿಕ್ ನಡೆಸಿ ಕೊಟ್ಟರು, ಗುರುಸ್ವಾಮಿ ನಾರಾಯಣ್ ಸುವರ್ಣ ರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದು ಸಂಯೋಜಕ್ ಪ್ರಶಾಂತ್ ಬಂಟ್ವಾಳ , ಹಿಂದು ಜಾಗರಣ ವೇದಿಕೆ ವೇಣೂರು ಪ್ರಖಂಡದ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸಾವ್ಯ, ಕಾರ್ಯದರ್ಶಿ ನಂದೀಶ್ ಪೂಜಾರಿ ಗುಜ್ಜೋಟ್ಟು, ಭಾ.ಜ.ಪಾ ಯುವ ಮೋರ್ಚಾದ ಉಪಾಧ್ಯಕ್ಷ ವಿನೀತ್ ಜೆ.ಎಸ್ ಸೇರಿದಂತೆ ಸಂಘಟನೆಯ ಮುಖಂಡರು ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.