ಚಾರ್ಮಾಡಿ ಘಾಟಿನಲ್ಲಿ ಬಂಡೆ ಕುಸಿತ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಳೆದ ಎರಡು ದಿನದಿಂದ ಭಾರಿ ಮಳೆಗೆ ಚಾರ್ಮಾಡಿ ಘಾಟ್ 2 ಮತ್ತು 3 ನೇ ತಿರುವಿನ ಮಧ್ಯೆ ಬಂಡೆ ಕುಸಿದ ಘಟನೆ ಆ. 5ಕ್ಕೆ ಸಂಜೆ ನಡೆದಿದೆ.

ಸಂಜೆ ಹೊತ್ತಿಗೆ ಬೃಹದಾಕಾರದ ಎರಡು ಬಂಡೆಗಳು ಕುಸಿದಿದ್ದು, ಸದ್ಯ ಒಂದು ವಾಹನ ಸಾಗುವಷ್ಟು ತೆರವು ಮಾಡಲಾಗಿದೆ.

 ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಸಂಜೆ 7ರ ಬಳಿಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ನಿರ್ಭಂದ ಇರುವುದರಿಂದ ರಾತ್ರಿ ತೆರವು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿಯಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಣ್ಣಪುಟ್ಟ ಭೂಕುಸಿತ ಉಂಟಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.