ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಶುಭಹಾರೈಸಿದ ಧರ್ಮಸ್ಥಳದ ಧರ್ಮಾಧಿಕಾರಿ

ಆಗಸ್ಟ್ 5 ರಂದು ಅಯೋದ್ಯೆಯಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಡಾ.ವಿರೇಂದ್ರ ಹೆಗಡೆಯವರಿಗೆ ಆಹ್ವಾನ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದ್ದಾರೆ.

ಅಯೋದ್ಯೆ ರಾಮ ನಿರ್ಮಾಣವಾಗುತ್ತಿರುವುದು ಭಾರತೀಯರಿಗೆ ಸಂತಸದ ಸುದ್ದಿ, ಹಲವಾರು ವರ್ಷಗಳಿಂದ ಶ್ರಮ ಪಡುತ್ತಿದ್ದ ರಾಮ ಭಕ್ತರಿಗೆ ಇದೀಗ ಸುಂದರವಾದ ದಿನ . ರಾಮನೆಂದರೆ ಭಗವಂತನ ಅವತಾರ .ಭಾರತೀಯರು ಭಕ್ತಿಯಿಂದ ಆರಾಧನೆ ಮಾಡುವ ದೇವರಲ್ಲಿ ರಾಮನು ಒಬ್ಬ. ತನ್ನ ಆದರ್ಶದಿಂದಲೇ ವಿಶ್ವ ವ್ಯಾಪಿಯಾದ ಶ್ರೀ ರಾಮನು ಭೂಮಿಯಲ್ಲಿ ಆವತರಿಸಿದ ನಂತರ ತನ್ನ ಸದ್ಗುಣಗಳಿಂದಾಗಿ ಆದರ್ಶ ಮೂರ್ತಿ ಎನಿಸಿಕೊಂಡಿದ್ದಾನೆ.

ವಿರೇಂದ್ರ ಹೆಗಡೆಯವರು ಕೆಲವು ತಿಂಗಳ ಹಿಂದೇ ಅಷ್ಟೇ ರಾಮ ಜನ್ಮ ಭೂಮಿಯನ್ನು ಭೇಟಿ ನೀಡಿದ್ದು,ಹಿರಿಯ ಸಂತರಿಗೆ ಗೌರವ ಸಮರ್ಪಿಸಿ ಬಂದಿದ್ದೇನೆ ಎಂದ ಅವರು ಈ ಸಾಧನೆಗೆ ಸಂಕಲ್ಪ ,ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲಾ ಶ್ರದ್ದಾಳುಗಳಿಗೆ ಮನಃಪೂರ್ವಕವಾಗಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.