HomePage_Banner_
HomePage_Banner_

ಮುಂಡೂರು: ಧಾರಾಕಾರವಾಗಿ ಸುರಿದ ಮಳೆಗೆ ಮನೆ ಮೇಲ್ಛಾವಣಿ (ಮಾಡು) ಕುಸಿತ @ಮನೆಯಲ್ಲಿದ್ದ 5 ಮಂದಿ ಅಪಾಯದಿಂದ ಪಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡೂರು: ಮೆಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಪರಂಬುಡೆಯಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿ (ಮಾಡು) ಕುಸಿದು ಮನೆಯಲ್ಲಿದ್ದ ಐದು ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಪರಂಬುಡೆ ಅಣ್ಣಿ ಆಚಾರ್ಯ ಅವರ ಮಣ್ಣಿನ ಮನೆಯ ಮಾಡು ಸಂಪೂರ್ಣ ಕುಸಿದಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಅಣ್ಣಿ ಆಚಾರ್ಯ ಅವರ ಕೈಗೆ ಸಣ್ಣ ಪ್ರಮಾಣದ ಗಾಯವಾಗಿದೆ.


ಈಗಾಗಲೇ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಪಿಡಿಓ,ಗ್ರಾಮಕರಣಿಕರು, ಊರವರು , ಎಸ್.ಕೆ. ಡಿ.ಆರ್.ಡಿ.ಪಿ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೇಟೀ ನೀಡಿ ಮನೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಶಾಸಕ ಹರೀಶ್ ಪೂಂಜರಿಗೆ ವಿಷಯ ತಿಳಿಸಲಾಗಿದ್ದು ಸರಕಾರದಿಂದ ಪರಿಹಾರ ನೀಡವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿರುತ್ತಾರೆ.
ಸದ್ಯ ಮನೆಯವರು ಸಂಭಂದಿಕರ ಮನೆಯಲ್ಲಿದ್ದು, ಮುಂದಕ್ಕೆ ಗುರುವಾಯನಕೆರೆ ನಿವಾಸಿ ಪುರುಷೋತ್ತಮ ಆಚಾರ್ಯ ರು ಮುಂಡೂರಿನ ತನ್ನಮನೆಯಲ್ಲಿ ಒಂದು ವಾರಗಳ ವಾಸ್ತ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.