HomePage_Banner_
HomePage_Banner_

ಪಡಂಗಡಿ: ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ಹೈಟೆನ್ಸನ್ ವಿದ್ಯುತ್ ಕಂಬ; ತಪ್ಪಿದ ಭಾರಿ ದುರಂತ, ಪ್ರಾಣಾಪಾಯದಿಂದ ಡ್ರೈವರ್ ಪಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ: ಇತ್ತಿಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಸುಬೋದ್ ಮಹಲ್ ಬಳಿ ಚಲುಸುತ್ತಿದ್ದ ಪಿಕಪ್ ಮೇಲೆ ಹೈಟೆನ್ಸನ್ ವಿದ್ಯುತ್ ಕಂಬ ಉರುಳಿ ಬಿದ್ದು ಘಟನೆ ಪಡಂಗಡಿಯಲ್ಲಿ ನಡೆದಿದೆ. ಬೆಳಿಗ್ಗಿನ ಜಾವ ಸುಮಾರು 5 ಗಂಟೆಗೆ ವೇಣೂರು ಗೋಳಿಯಂಗಡಿಯಿಂದ ಗುರುವಾಯನಕೆರೆಗೆ ಲಿನ್ಸ್ ಟಿ.ಡಿಯವರು ಪಿಕಪ್ ಚಲಾಯಿಸಿಕೊಂಡು ಬರುತ್ತಿರುವ ಸಂದರ್ಭ ಪಡಂಗಡಿ ಸುಬೋದ್ ಮಹಲ್ ಬಳಿ ಹೈಟೆನ್ಸನ್ ವಿದ್ಯುತ್ ಕಂಬ ಮುರಿದು ಪಿಕಪ್ ಮೇಲೆ ಬಿದಿದ್ದೆ.

ಕಂಬ ಬಿದ್ದ ರಭಸಕ್ಕೆ ಪಿಕಪ್ ನಜ್ಜುಗುಜ್ಜಾಗಿದ್ದು ಪಿಕಪ್‌ನಲ್ಲಿದ್ದ ಡ್ರೈವರ್‌ಗೆ ಯಾವುದೇ ಗಾಯವಾಗದೆ ಪ್ರಣಾಪಾಯದಿಂದ ಪಾರಗಿದ್ದಾರೆ. ಇನ್ನು ಎರಡು ಕಂಬಗಳು ವಾಲಿದ್ದು ಬೀಳುವ ಹಂತದಲ್ಲಿದ್ದೆ. ಘಟನೆ ನಡೆದ ಕೂಡಲೇ ಊರವರು, ಸಾರ್ವಜನಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು ಕೂಡಲೇ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಇದೀಗ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.