ಗೇರುಕಟ್ಚೆ : ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿಯ ಕುಟುಂಬಕ್ಕೆ ದಿನಸಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಗೇರುಕಟ್ಟೆ ವಲಯದಿಂದ ಸದಸ್ಯ ರಿಂದ ಬಡಕುಟುಂದ ಮನೆಗೆ 2 ತಿಂಗಳಿಗೆ ‌ಬೇಕಾಗುವ ಆಹಾರ ಧಾನ್ಯ ದಿನಸಿ ಸಾಮಗ್ರಿಗಳನ್ನು ಆ.2 ರಂದು ವಿತರಣೆ ಮಾಡಿದರು.ಕಳಿಯ ಗ್ರಾಮದ ಮಜಲಡ್ಡ ನಿವಾಸಿ ಹದಿಹರೆಯದ ಸಂದೀಪ್ ಪೂಜಾರಿ ಕಳೆದ ಕೆಲವು ದಿನಗಳ ಹಿಂದೆ ಕೃಷಿಯಲ್ಲಿ ನಿರತರಾಗಿದ್ದು ಮರದಿಂದ ಬಿದ್ದು ಸೊಂಟಕ್ಕೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು.ಹಾಗೂ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನು ಗಮನಿಸಿದ ಸಂಘದ ಸದಸ್ಯರು ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಘಟಕದ ಸಂಚಾಲಕರು ಯೋಗೀಶ್ ಸುವರ್ಣ ಅಡ್ಡಕೊಡಂಗೆ ಸಂಪೂರ್ಣ ಸಹಕಾರ ಘಟಕ ಅಧ್ಯಕ್ಷರು ರಾಜೇಶ್ ಕೋಟ್ಯಾನ್, ನಾಣ್ಯಪ್ಪ ಪೂಜಾರಿ ಕಲ್ಲಾಪು, ಸಚಿನ್ ಸಾಲಿಯಾನ್, ಸತೀಶ್ ಗೇರುಕಟ್ಟೆ, ರಂಜನ್ ಗೇರುಕಟ್ಟೆ,ದಾಮೋದರ್ ಇಡ್ಯಾ, ಪುರುಷೋತ್ತಮ್ ಬದಿನಡೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.