ಸುಸಜ್ಜಿತ ಆಂಬ್ಯುಲೆನ್ಸ್ ಲೋಕಾರ್ಪಣೆ

ಉಜಿರೆ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ನೀಡಲಾದ ಸುಸಜ್ಜಿತ ಆಂಬ್ಯುಲೆನ್ಸ್‌ನ್ನು ಜು.30 ರಂದು ಲೋಕಾರ್ಪಣೆ ಮಾಡಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಧನಂಜಯ್ ರಾವ್ ಆಂಬ್ಯುಲೆನ್ಸ್ ಉದ್ಘಾಟಿಸಿದರು ಶುಭ ಹಾರೈಸಿದರು.


ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಈಗಾಗಲೇ ಹೃದಯ ಸ್ತಂಬನ ಮುಂತಾದ ತುರ್ತು ಸಂದರ್ಭಗಳಲ್ಲಿ ಬಹು ಉಪಯುಕ್ತವಾದ ವೆಂಟಿಲೇಟರ್, ಪೇಸೆಂಟ್ ಮೋನಿಟರ್, ಡಿಫಿಬ್ರಿಲೇಟರ್ ಮುಂತಾದ ಸುಧಾರಿತ ತಂತ್ರಜ್ಞಾನ ಹೊಂದಿರುವ ಕಾರ್ಡಿಕ್ ಆಂಬ್ಯುಲೆನ್ಸ್ ಸೇರಿ ಒಟ್ಟು ೩ ಆಂಬ್ಯುಲೆನ್ಸ್ ಕಾರ್ಯಾಚರಿಸುತ್ತಿದ್ದು, ಬೆಳ್ತಂಗಡಿ ತಾಲೂಕು ಹಾಗೂ ಆಸುಪಾಸಿನ ತಾಲೂಕಿನ ಜನರಿಗೆ ಬಹು ಉಪಯುಕ್ತವಾಗಿದೆ. ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ| ಎಂ. ಕಾಶೀನಾಥ ಶೆಣೈ, ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಮನ್ಮಥ್ ಕುಮಾರ್, ಡಾ| ಸಾತ್ವಿಕ್ ಜೈನ್, ಡಾ| ಪವನಕುಮಾರ್, ಡಾ| ಸಂದೀಪ್ ಹೆಚ್.ಎಸ್, ಡಾ|ಚಂದ್ರಶೇಖರ್ ಡಿ. ಚವಾಣ್, ಡಾ| ದೇವೇಂದ್ರ ಕುಮಾರ್, ಡಾ|ಬಾಲಕೃಷ್ಣ ಭಟ್, ಡಾ| ಕಮಲಾ ಭಟ್, ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.