ಅಕ್ರಮ ಗೋಸಾಗಟ:ಪಿಕಾಪ್ ಸಹಿತ ಆರೋಪಿ ಬಂಧನ

Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಜು. 30ರಂದು ಬೆಳಿಗ್ಗೆ 8.ಗಂಟೆಗೆ ಬೆಳ್ತಂಗಡಿ ಠಾಣಾ ಎಸ್ಐ ನಂದಕುಮಾರ್ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್‌ ನಲ್ಲಿರುವಾಗ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಎಂಬಲ್ಲಿ ಆರೋಪಿ ನಾವೂರು ಗ್ರಾಮದ.ಕೈಕಂಬ ನಿವಾಸಿ ರಫೀಕ್ (36) ಎಂಬಾತ ಯಾವುದೇ ಪರವಾನಿಗೆ ಯಾ ದಾಖಲಾತಿ ಪತ್ರಗಳನ್ನು ಹೊಂದದೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಪಿಕಪ್‌ ವಾಹನ ನಂಬ್ರ: ಕೆಎ21ಸಿ0537ನೇದಲ್ಲಿ ತುಂಬಿಸಿ ಕಿಲ್ಲೂರು ಕಡೆಯಿಂದ ಪಿಕಪ್‌ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿತನನ್ನು ವಶಕ್ಕೆ ಪಡೆದು ಆರೋಪಿತನು ಸಾಗಾಟ ಮಾಡುತ್ತಿದ್ದ ಕಂದು ಬಣ್ಣದ ಹಸು-1 ಹಾಗೂ ಕಂದು ಬಣ್ಣದ ಹೋರಿ ಕರು-1 ನ್ನು ಮತ್ತು ಸಾಗಾಟಕ್ಕೆ ಉಪಯೋಗಿಸಿದ ಪಿಕಪ್‌ ವಾಹನವನ್ನು ಸ್ವಾದೀನ ಪಡಿಸಿಕೊಂಡಿದ್ದು ಸ್ವಾದೀನಪಡಿಸಿಕೊಂಡ ಜಾನುವಾರು ಹಾಗೂ ಪಿಕಪ್‌ನ ಒಟ್ಟು ಮೌಲ್ಯ ರೂ 5,14,000/- ಆಗಬಹುದು ಎಂದು ಅಂದಾಜಿಸಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.