ಶಾಸಕ ಹರೀಶ್ ಪೂಂಜರಿಂದ ವಿದ್ಯುತ್ ಅವಘಡ ಸಂಭವಿಸಿದ ಕುಟುಂಬಕ್ಕೆ ಮೆಸ್ಕಾಂ ಸಾಂತ್ವನ ನಿಧಿಯಿಂದ 1 ಲಕ್ಷ ಪರಿಹಾರ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕನ್ನಾಜೆ ನಿವಾಸಿ 34 ವರ್ಷ ಪ್ರಾಯದ ಯೋಗೀಶ್ ಸಫಲ್ಯ ಬಿನ್.ರಾಜು ಸಫಲ್ಯ ಇವರು ಕಳೆದ ವರ್ಷ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಅವಘಢ ಸಂಭವಿಸಿ ದುರ್ಮರಣಕ್ಕೀಡಾಗಿದ್ದು ಶಾಸಕ ಹರೀಶ್ ಪೂಂಜ ರವರ ಪರಿಶ್ರಮದ ಫಲವಾಗಿ ಮೆಸ್ಕಾಂ ನಿಗಮದ ಸಾಂತ್ವಾನ ನಿಧಿ ಯೋಜನೆಯಡಿ ಮಂಜೂರಾದ ರೂ.1.00 ಲಕ್ಷದ ಪರಿಹಾರ ಧನದ ಚೆಕ್ ನ್ನು ಮೃತರ ತಾಯಿಯವರಾದ ಸುಶೀಲ ಇವರಿಗೆ ಶಾಸಕರ ಕಚೇರಿ – ಶ್ರಮಿಕ ದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲಾಯಿಲ ತಾಲೂಕು ಪಂಚಾಯತ್ ಸದಸ್ಯರಾದ  ಸುಧಾಕರ್ ಬಿ.ಎಲ್, ಮಾಜಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಗಿರೀಶ್ ಡೋಂಗ್ರೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ  ಗಣೇಶ್ , ಕಾರ್ಯದರ್ಶಿ  ಉಮೇಶ್ ಶೆಟ್ಟಿ, ಬೆಳ್ತಂಗಡಿ ನಗರ ಪಂಚಾಯತ್ ಸದಸ್ಯರಾದ  ಶರತ್ ಕುಮಾರ್, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ಶಿವಶಂಕರ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀ ಮಂಜುನಾಥ್ ಎಂ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.