ಬೆಳ್ತಂಗಡಿ; 45 ದಿನಗಳ ಮಗು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ಹಾಗೂ ಮಗುವಿನ ಅಜ್ಜಿಗೆ ಕರೋನಾ ಪಾಸಿಟಿವ್ ಬಂದ ಘಟನೆ ಇಂಧಬೆಟ್ಟು ಗ್ರಾಮದ ಬಂಗಾಡಿಯಲ್ಲಿ ನಡೆದಿದೆ. ಮಗುವಿನ ತಲೆಯಲ್ಲಿ ಸಣ್ಣ ಗುಳ್ಳೆಯಿಂದಾಗಿ ಅನಾರೋಗ್ಯಕ್ಕೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಚಿಕಿತ್ಸೆ ಬಳಿಕವಾರಗಳ ಹಿಂದೆ ಮನೆಗೆ ಮರಳಿದ್ದ ಹಸುಗೂಸು ಸಾವನ್ನಪ್ಪಿದ ಜು. 29 ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದರ ಬೆನ್ನಿಗೇ ಮೃತ ಮಗುವಿನ 50 ವರ್ಷ ಪ್ರಾಯದ ಅಜ್ಜಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಸಂಬಂಧ ಅವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ಮೃತ ಮಗುವಿನ ಕೊರೊನಾ ಟೆಸ್ಟ್ ಬೆಳ್ತಂಗಡಿಯಲ್ಲಿ ನಡೆಸಲಾಗಿದ್ದು ನೆಗೆಟಿವ್ ಬಂದಿದೆ