ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ 2020-21 ನೇ ಸಾಲಿನ ಆತ್ಮ ಯೋಜನೆಯಡಿ ರೈತರ ಕ್ಷೇತ್ರ ಪಾಠ ಶಾಲೆ ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಚಾಕೋಟ್ಟೆತ್ತಡಿ ಡೊಂಬಯ್ಯ ಪೂಜಾರಿಯವರ ಮನೆಯಲ್ಲಿ ಜು. 30 ರಂದು ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ನಿಡ್ಲೆ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸಮಗ್ರ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಚಿದಾನಂದ ಎಸ್ ಹೂಗಾರ್ ಉಪಸ್ಥಿತರಿದ್ದರು. ಕ್ಷೇತ್ರ ಪಾಠ ಶಾಲೆಯಲ್ಲಿ ಮೇದಿನಿ ಫಾರ್ಮ್ನ ಕೆ. ಶ್ರೀಧರ ರಾವ್, ರಘುಚಂದ್ರ ಚಾಕೋಟೆತ್ತಡಿ ಈರಪ್ಪ ಗೌಡ ಪಿಲ್ಯಡ್ಕ, ರುಕ್ಮಯ ಗೌಡ ಬರೆಮೇಲು, ಮಹಾಬಲ ಗೌಡ ಚಾಕೋಟೆತ್ತಡಿ, ನೀಲಯ್ಯ ಗೌಡ ಮೂಡಾಯಿಮಜಲು, ಜಯಪ್ರಸಾದ್ ಕಳೆಂಜ ಮತ್ತು ಇತರ ಅನೇಕ ರೈತರು ಉಪಸ್ಥಿತರಿದ್ದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶರಣ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಚಿದಾನಂದ ಎಸ್ ಹೂಗಾರ್ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಚಂದ್ರಕಲಾ ಡಿ.ಸಿ ಸಹಕರಿಸಿದರು.