ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಸಾಮ್ಯುಯೆಲ್ ಗೆ ಧರ್ಮಸ್ಥಳ ‌ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ

ಧರ್ಮಸ್ಥಳ: ಧರ್ಮಸ್ಥಳ ‌ಪೊಲೀಸ್ ಠಾಣೆಯಲ್ಲಿ 1994 ರಲ್ಲಿ ಕಾನ್ಸ್ ಟೇಬಲ್ ಆಗಿ ನೇಮಕಗೊಂಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ 2016 ರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ತನಿಖಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಾಮ್ಯುಯೆಲ್ ರವರು ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿ ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆ ಹೊಂದಿರುತ್ತಾರೆ.

ಇವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯ ವತಿಯಿಂದ ಬೀಳ್ಗೊಡುಗೆ ನಡೆಯಿತು. ಪಿ.ಎಸ್.ಐ ಗಳಾದ ಪವನ್ ನಾಯಕ್, ಚಂದ್ರಶೇಖರ ಮತ್ತು ಠಾಣಾ ಸಿಬ್ಬಂದಿಯಿಂದ ಸರಳ ರೀತಿಯಲ್ಲಿ ಬೀಳ್ಗೊಡುಗೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.