ಬೆಳ್ತಂಗಡಿ: ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಮಂಗಳೂರು-ಕುಡ್ಲ ಇದರ ದಶಮಾನೋತ್ಸವ ವರ್ಷದ ನೂತನ ಅಧ್ಯಕ್ಷರಾಗಿ ಹರೀಶ್. ಕೆ. ಪೂಜಾರಿ ಬೈಲಬರಿ ಬಳಂಜ ಆಯ್ಕೆಯಾಗಿದ್ದಾರೆ.
ಬಳಂಜ ಗ್ರಾಮದ ಕೊಂಗುಲ ಬೈಲಬರಿ ನಿವಾಸಿಯಾಗಿರುವ ಹರೀಶ್ ಕೆ ಅವರು ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಂಗಳೂರು ದಕ್ಷಿಣ ವಿಧಾನ ಸಭಾ ವಲಯದ ಅಧ್ಯಕ್ಷರಾಗಿ, ಗೋಕರ್ಣನಾಥ ಕೋ ಅಪರೇಟಿವ್ ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.