ರೋಗ ಲಕ್ಷಣಗಳಿಲ್ಲದೆ ಕೊರೊನಾ ಪಾಸಿಟಿವ್ ಬಂದರೆ ಮನೆಯಲ್ಲೇ ಚಿಕಿತ್ಸೆಗೆ ಅವಕಾಶ; ತಹಶೀಲ್ದಾರ್ ಮಹೇಶ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಕೋವಿಡ್ ಸಾರ್ವತ್ರಿಕ ಹಬ್ಬಿರುವ ಕಾರಣದಿಂದ ಆರೋಗ್ಯ ಇಲಾಖೆಯಿಂದ ಎಲ್ಲ ಕಡೆ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಒಂದು ವೇಳೆ ರೋಗಲಕ್ಷಣಗಳಿಲ್ಲದವರಿಗೆ ಪಾಸಿಟಿವ್ ಬಂದರೆ ಸೌಕರ್ಯಗಳಿರುವವರಿಗೆ ಅವರವರ ಸ್ವಂತ ಮನೆಯಲ್ಲೇ ಚಿಕಿತ್ಸೆಗೆ ಅವಕಾಶವಿದೆ. ಜನ ಭಯಪಡದೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಹಶಿಲ್ದಾರ್ ಮಹೇಶ್ ಜಿ ಹೇಳಿದರು.

ಆರೋಗ್ಯ ಇಲಾಖೆ ವತಿಯಿಂದ ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ,  ರಾಜ ಕೇಸರಿ ಬೆಳ್ತಂಗಡಿ (ರಿ), ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಇವುಗಳ ಸಹಯೋಗದೊಂದಿಗೆ ಇಲ್ಲಿನ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ಜು. 29 ರಂದು ನಡೆದ ಕೊರೊನಾ ಉಚಿತ ತಪಾಸಣೆ, ವೈದ್ಯಕೀಯ ಸಲಹೆ‌ ಮತ್ತು ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುವರ್ಣ‌ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್, ರಾಜ ಕೇಸರಿ (ರಿ) ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್, ಆರೋಗ್ಯ ಇಲಾಖೆಯ ಮೇಲ್ವಿಚಾರಕ ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು.

ಸನ್ಮಾನ;
ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ತಾಲೂಕು ಸಂಚಾಲಕರೂ ಆಗಿದ್ದು, ಕೊರೊನಾ ಕಾಲಘಟ್ಟದಲ್ಲಿ ರಾಜಕೇಸರಿ‌ಸಂಘಟನೆ ಗುರುತಿಸಿದಂತೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜಯ್ ಅರವರನ್ನು ಈ ಸಂದರ್ಭ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಅಖಿಲ ಕರ್ನಾಟಕ ರಾಜ ಕೇಸರಿ (ರಿ) ಸಂಸ್ಥಾಪಕ ದೀಪಕ್ ಜಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ತಪಾಸಣಾ ತಂಡ ರಕ್ಷಣಾತ್ಮಕ ವ್ಯವಸ್ಥೆ ಯೊಂದಿಗೆ ತಪಾಸಣೆ ನಡೆಸಿ 3 ಗಂಟೆಯೊಳಗೆ ಫಲಿತಾಂಶ ನೀಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.