ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಜಾಗೃತಿ ಅಭಿಯಾನ; ಚೀನಾ ವಸ್ತುಗಳ ಮಾರಾಟ ಹಾಗೂ ಖರೀದಿಗಳನ್ನು ಬಹಿಷ್ಕರಿಸೋಣ

ಬೆಳ್ತಂಗಡಿ: ‌ಗಡಿಯಲ್ಲಿ ಭಾರತ ಚೀನಾ ಸಂಬಂಧ ಹದಗೆಟ್ಟಿದ್ದು ಚೀನಾದ ಉದ್ದಟತನದಿಂದ ಯುದ್ದೋನ್ಮಾದದ ಬೀತಿ ಆವರಿಸಿದೆ‌.ಹೀಗಾಗಿ ಚೀನಾಗೆ ತಕ್ಕ ಪಾಠ ಕಲಿಸಬೇಕೆಂದು ಇಡೀ ನಮ್ಮ ದೇಶದಲ್ಲಿ ಒಗ್ಗಟ್ಟಿನ ಹೋರಾಟ ಶುರುವಾಗಿದ್ದು ಚೀನಾ ನಿರ್ಮಿತ ಯಾವುದೇ ವಸ್ತುಗಳನ್ನು ಖರೀದಿಸದಂತೆ ಕರೆ ನೀಡಲಾಗಿದೆ.ಇಗಾಗಲೇ ಚೀನಾದ 59 ಆ್ಯಪ್ ಗಳನ್ಮು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ‌.


ಈ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರ ನಿರ್ದೇಶನದಂತೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಚೀನಾ ವಸ್ತುಗಳ ಮಾರಾಟ ಹಾಗೂ ಖರೀದಿಯನ್ನು ಬಹಿಷ್ಕರಿಸೋಣ ಜಾಗೃತಿ ಅಭಿಯಾನ ಶುರುವಾಗಿದ್ದು ತಾಲೂಕಿನ 81 ಗ್ರಾಮಗಳಲ್ಲಿ ಹಾಗೂ ಪಟ್ಟಣದ ಅಂಗಡಿ ಮಳಿಗೆಗಳಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳು ತೆರಳಿ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸುತ್ತಿದ್ದಾರೆ.


ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಗೌಡ ಬೆಳಾಲು, ಕಾರ್ಯದರ್ಶಿ ಉಮೇಶ್ ಕುಲಾಲ್ ಪದಾಧಿಕಾರಿಗಳಾದ ಪ್ರಮೋದ್ ಗೌಡ ,ವಿನಿತ್ ಕೋಟ್ಯಾನ್ ,ವಸಂತಕುಂಬಾರ ಚಂದ್ರಕಾಂತ್, ರಂಜು ಕೊಕ್ಕಡ ,ಪ್ರದೀಪ್ ಉಜಿರೆ ,ಪ್ರಸ್ತುತ್ ಜೈನ್, ಸುಧಾಕರ್, ಗಿರೀಶ್ ನಿಡ್ಲೆ ,ದಿವಿನ್ ಚಾರ್ಮಾಡಿ ,ಸುಕೇಶ್ ಪಡಂಗಡಿ, ಓಂಕಾರ್ ಜೈನ್, ಪ್ರಕಾಶ್ ,ಕಾರ್ತಿಕ್ ಇಳಂತಿಲ, ಅಶೋಕ ಪಡಂಗಡಿ, ರಾಜೇಶ್ ಹರೀಶ್, ರೋಷನ್, ಸುಧಾಕರ್ ಉಪಸ್ಥಿತರಿದ್ದರು ಹಾಗೂ ಗ್ರಾಮ ಮಟ್ಟದ ಕಾರ್ಯಕರ್ತರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.