ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಜಿ.ಆರ್ ಭಟ್ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಉಜಿರೆಯ ದಿ| ಪುಂಡಲೀಕ ಭಟ್ ಮತ್ತು ದಿ| ಸುಮಿತ್ರಾ ಭಟ್ ರವರ ಪ್ರಥಮ ಪುತ್ರ ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್, ನಾಗರೀಕ ಸೇವಾ ಟ್ರಸ್ಟ್ ನ ಉಪಾಧ್ಯಕ್ಷೆ ವಿದ್ಯಾ ನಾಯಕ್ ರ ಸಹೋದರ ಜಿ.ಆರ್ ಭಟ್ (67ವ)  ಇವರು ಹೃದಯಾಘಾತದಿಂದ ಜು.25 ರಂದು ದುಬೈಯ ತನ್ನ ಮಗ ಇಂಜಿನಿಯರ್ ರವಿಕಿರಣ್ ಅವರ ಮನೆಯಲ್ಲಿ ನಿಧನರಾದರು.

ಇವರು ಗೋಕರ್ಣ ಪರ್ತಗಾಳಿ ಮಠ, ಕಾಶೀ ಮಠ, ದೆಹಲಿ ಮತ್ತು ಹರಿದ್ವಾರದಲ್ಲಿ ಸ್ವಾಮೀಜಿಯವರ ಆಪ್ತ ವಲಯದಲ್ಲಿದ್ದು ಸೇವೆ ಸಲ್ಲಿಸಿದ್ದರು. ಜಿ ಆರ್ ಭಟ್ ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿ ಖಾಯಂ ವಾಸ. ಇವರ ತಂದೆ ತಾಯಿಯವರ ಮನೆ ಮುಂಡಾಜೆಯಲ್ಲಿತ್ತು. ನಂತರ ಉಜಿರೆ ಹಳೆಪೇಟೆಯಲ್ಲಿ ವಾಸ್ತವ್ಯವಿದ್ದರು

ಕೈಲಾಸ ಮಾನಸ ಸರೋವರ, ವೈಣ್ಣೋದೇವಿ, ಚಾರ್ ಧಾಮ, ಅಮರನಾಥ ಪಂಡರಾಪುರ ಸಹಿತ ನೂರಾರು ದೇವಸ್ಥಾನಗಳ ದರ್ಶನ, ಹಲವು ಬಾರಿ ಪಾದಯಾತ್ರೆ ಮಾಡಿದ್ದ ಕುಂಭಮೇಳಗಳಲ್ಲಿ ಭಾಗವಹಿಸುತ್ತಿದ್ದ ದೈವಭಕ್ತರಾದ ಇವರು ತನ್ನ ಕುಟುಂಬಕ್ಕೆ ಸಂಬಂಧಿಸಿದ ಬೆಳ್ತಂಗಡಿಯ ಪ್ರಸಿದ್ಧ ಕಲ್ಕಣಿಯ ದೈವಸ್ಥಾನಗಳ ಆರಾಧಕರಾಗಿದ್ದರು.

ಮೃತರು ಪತ್ನಿ, ಒರ್ವ ಪುತ್ರಿ, ಒರ್ವ ಪುತ್ರಿ, ಇಬ್ಬರು ಮೊಮ್ಮಕ್ಕಳು, ಒರ್ವ ಸಹೋದರ ಮತ್ತು ಮೂವರು ಸಹೋದರಿಯನ್ನು ಹಾಗೈಯ ಬಂಧು ವರ್ಗದವರನ್ನು ಅಗಲಿದ್ದಾರೆ.

ಜಿ ಆರ್ ಭಟ್ ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿ ಖಾಯಂ ವಾಸ. ಇವರ ತಂದೆ ತಾಯಿಯವರ ಮನೆ ಮುಂಡಾಜೆಯಲ್ಲಿತ್ತು. ನಂತರ ಉಜಿರೆ ಹಳೆಪೇಟೆಯಲ್ಲಿ ವಾಸ್ತವ್ಯವಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.