ದಿ. ಮೂಡಾಜೆ ವಿಠಲ್ ಭಟ್ ಗೆ ನುಡಿನಮನ

ಇಳಂತಿಲ: ಇಲ್ಲಿಯ ಇತ್ತೀಚೆಗೆ ನಿಧನರಾದ  ವಿಠಲ ಭಟ್ ಮೂಡಜೆ ಇವರಿಗೆ ಜು.25 ರಂದು ಇಳಂತಿಲ ಸಭಾಭವನದಲ್ಲಿ ನುಡಿ ನಮನ ಸಲ್ಲಿಸಿದರು.

ನುಡಿ ನಮನ ಕಾರ್ಯಕ್ರಮದಲ್ಲಿ  ವಿವೇಕಾನಂದ ವಿಧ್ಯಾಸಂಸ್ಥೆಯ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್, ವಿದಾನಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್,ಮಾಜಿ ವಿದಾನಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಶಾಸಕರಾದ  ಹರೀಶ್ ಪೂಂಜ ರವರು ತಮ್ಮ ಮಾತುಗಳ ಮೂಲಕ ನುಡಿ ನಮನ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ  ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿದರು. ಪ್ರಾರಂಭದಲ್ಲಿ ಮೌನ ಪ್ರಾರ್ಥನೆ ಮೂಲಕ ಎಲ್ಲರೂ ಎದ್ದು ನಿಂತು ಶಾಂತಿ ಬಯಸಿದರು. ಗಣ್ಯರು ದಿ. ವಿಠಲ್ ಭಟ್ ಮೂಡಾಜೆರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಂತಿ ಕೋರಿದರು. ನೆರೆದಿದ್ದ ಯುವಕ ಮಂಡಲ ,ಹಾಲು ಉತ್ಪಾದಕರ ಸಂಘ,ವಾಣಿಶ್ರೀ ಗೆಳೆಯರ ಬಳಗ, ವಾಣಿಶ್ರೀ ಭಜನಾ ಮಂದಿರ,ಬಿಜೆಪಿ ಗ್ರಾಮಸಮಿತಿ,ಮೊದಲಾದ ಸಂಘಸಂಸ್ಥೆಯ ಸದಸ್ಯರು ಪುಷ್ಪಾರ್ಚನೆ ಮೂಲಕ ನುಡಿ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.