ರೋಟರಿ ಕ್ಲಬ್ ನಿಂದ 600 ಮಂದಿ ಆಶಾ ಮತ್ತು ಆರೋಗ್ಯ ಕಾಯ೯ಕತೆ೯ಯರಿಗೆ ಸುರಕ್ಷಿತಾ ಪರಿಕರ ವಿತರಣೆ

ಬೆಳ್ತಂಗಡಿ: ತಾಲೂಕಿನಲ್ಲಿ 20 ದಿನಗಳ ಕಾಲ ಮನೆ ಮನೆ ಬೇಟಿ ನೀಡಿ ಕರ್ತವ್ಯ ನಿರ್ವಹಿಸಿಲಿರುವ 600 ಜನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕಿಯರ ಸುರಕ್ಷತೆ ದೃಷ್ಟಿಯಿಂದ ರೋ ಪ್ರತಾಪ್‌ ಸಿಂಹ ನಾಯಕ್ ರವರ ಆಶಯದಂತೆ ಬೆಳ್ತಂಗಡಿ ಮತ್ತು ಮಡಂತ್ಯಾರು ರೋಟರಿ ಕ್ಲಬಿನಿಂದ ರೂ 1ಲಕ್ಷ ವೆಚ್ಚದ ಪರಿಕರ ಮತ್ತು ಉಜಿರೆ ಪಿಸಿಪೈ ಪೆಟ್ರೋಲ್ ಪಂಪಿನವರಿಂದ 2 ಸ್ಪ್ರೇಯರ್ ಗಳ ಹಸ್ತಾಂತರ ಜು.25 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಜರುಗಿತು. ಬೆಳ್ತಂಗಡಿ ತಾಲೂಕಿನ 600 ಜನ ಕಾರ್ಯಕರ್ತರಿಗೆ ಸುಮಾರು ರೂ.100000 ಮೌಲ್ಯದ ಫೇಸ್ ಶೀಲ್ಡ್ ಮತ್ತು ಗ್ಲೌಸ್ಗಳನ್ನು ರೋಟರಿ ಕ್ಲಬ್ ವತಿಯಿಂದ ಶಾಸಕ ಹರೀಶ್ ಪೂಂಜ ವಿತರಿಸಿದರು.

ಈ ಸಂದಭ೯ದಲ್ಲಿ ರೋಟರಿ ಜಿಲ್ಲಾ ಸಹಾಯಕ ಗವನ೯ರ್ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್, ಕಾರ್ಯದಶಿ೯ ಶ್ರೀಧರ ಕೆ.ವಿ, ರೋಟೆರಿಯನ್ ಗಳಾದ ಡಾ. ಶಶಿಧರ ಡೋಂಗ್ರೆ, ಪಿತಾಂಬರ ಹೇರಾಜೆ, ರೊಟರಿ ಝೋನಲ್ ಲೆಫ್ಟೀನೆಂಟ್ ಮೋನಪ್ಪ ಫೂಜಾರಿ ಕಂಡೆಂತ್ಯಾರ್, ಮಡಂತ್ಯಾರು ಕಾಯ೯ದಶಿ೯ ರಾಜೇಶ್ ಕೃಷ್ಣ , ಕೋಶಾಧಿಕಾರಿ ಹಷ೯ನಾರಾಯಣ, ಪಿ.ಸಿ.ಪೈ ಪೆಟ್ರೋಲ್ ಪಂಪು ಉಜಿರೆಯ ಮಾಲಕ ವಾಮನ ಪೈ, ಡಾ. ಕಲಾಮಧು, ತಾಪಸ ಜೋಯೆಲ್ ಮೆಂಡೋನ್ಸಾ, ರೋಟರಿ ಕ್ಲಬ್ ನ ಸದಸ್ಯರು, ಆರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.