ಜು.26 ಸಂಡೇ ಲಾಕ್‌ಡೌನ್ ಮುಂದುವರಿಕೆ

ಬೆಳ್ತಂಗಡಿ: ವಾರದ ಲಾಕ್‌ಡೌನ್ ಕೊನೆಗೊಂಡಿದ್ದರೂ ಭಾನುವಾರದ ಲಾಕ್‌ಡೌನ್ ಈ ಹಿಂದಿನಂತೆ ಜು.26ರಂದೂ ಮುಂದುವರಿಯಲಿದೆ.

ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು ಇದೀಗ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲಾಗಿದೆ. ಆದರೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮಾತ್ರವಲ್ಲದೆ ಜು.26ರಂದು ನಾಲ್ಕನೇ ಭಾನುವಾರದ ಲಾಕ್‌ಡೌನ್ ನಡೆಯಲಿದ್ದು, ಜು. 25ರ ರಾತ್ರಿ 9 ಗಂಟೆಯಿಂದ ಇದು ಜಾರಿ ಬರಲಿದೆ. ಸಂಡೇ ಲಾಕ್‌ಡೌನ್ ಸಂದರ್ಭ ಸಂಪೂರ್ಣ ವಾಣಿಜ್ಯ, ವ್ಯವಹಾರ ಮತ್ತು ವಾಹನಗಳ ಓಡಾಟ ಸ್ಥಗಿತಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.